1 ಮತ್ತು 2 ತಿಮೊಥೆಯನಿಗೆ ಮತ್ತು ತೀತನಿಗೆ

ಪೌಲನು ತನ್ನ ಅವಸಾನ ಕಾಲಕ್ಕೆ ಸಮೀಪಿಸಿದಂತೆ, ಆತನು ನಂಬಿಕೆಯ ವಿಷಯದಲ್ಲಿ ತನ್ನ “ಪುತ್ರರು” ಆಗಿದ್ದ ತಿಮೊಥೆ ಮತ್ತು ತೀತನಿಗೆ ಬರೆದನು. ಈ ಯುವಪ್ರಾಯದ ಸುವಾರ್ತಿಕರಿಗೆ ಎಫೆಸ ಹಾಗೂ ಕ್ರೇತದಲ್ಲಿನ ಅವರವರ ಸೇವೆಗಳಲ್ಲಿ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕೆಂದು ಬಯಸಿದನು. ಇವರು ಸಭೆಯಲ್ಲಿ ಪರಿಣಾಮಕಾರಿ ಮತ್ತು ಫಲಭರಿತ ಸೇವೆ ಮಾಡಬೇಕೆಂದು ಮತ್ತು ಸತ್ಯವನ್ನು ಸಾರಿ ಸುಳ್ಳು ಬೋಧನೆಯನ್ನು ಖಂಡಿಸುವದನ್ನು ಎಂದಿಗೂ ಬಿಟ್ಟು ಬಿಡಬಾರದೆಂದು ಬಯಸಿದನು. ಅಲ್ಲದೆ ಕ್ರೈಸ್ತ ಜೀವಿತವನ್ನು ಹೇಗೆ ನಡಿಸಬೇಕೆಂಬ ಕುರಿತಾದ ಈ ಉಪದೇಶಗಳು ದೈವಪ್ರೇರಿತ ಎಂಬುದನ್ನು ಸಹ ಆತನು ಒತ್ತಿ ಹೇಳಿದನು. ದೇವರು ತನಗೆ ತೋರಿಸಿದ ಕರುಣೆ ಬಗ್ಗೆ ಒತ್ತಿ ಹೇಳಿದನು ಮತ್ತು ಸಹೋದರರು ಸತ್ಯವನ್ನು ಕಾಪಾಡಿ, ಸಂರಕ್ಷಿಸಬೇಕು ಮತ್ತು ಅಭ್ಯಾಸಿಸಬೇಕು ಎಂಬ ಕಳಕಳಿಯನ್ನು ಸಹ ವ್ಯಕ್ತಪಡಿಸಿದನು.

ಈ ಮೂರು ಪತ್ರಿಕೆಗಳ ಕುರಿತು ಅನೇಕ ವರ್ಷಗಳ ಕಾಲ ಅಧ್ಯಯನ ಮತ್ತು ಬೋಧನೆ ಮಾಡಿದ ಬಳಿಕ, ಡೇವಿಡ್‌ ರೋಪರ್‌ (David Roper) ಅತ್ಯುತ್ಕೃಷ್ಟವಾದ ವಚನದಿಂದ-ವಚನದ ಅಧ್ಯಯನವನ್ನು ರಚಿಸಿರುತ್ತಾನೆ. ರೋಪರ್‌ನ ಕಣ್ಣಿಗೆ ಕಟ್ಟಿದಂಥ ರೀತಿಯಲ್ಲಿ ಬರೆಯುವ ಶೈಲಿಯಿಂದ ಕಥಾನಿರೂಪಣೆಗಳು ಮತ್ತು ಪದದ ಅಧ್ಯಯನಗಳು ಸಜೀವಗೊಳ್ಳುತ್ತವೆ.

ದೇವರ ವಾಕ್ಯದ ವಿದ್ಯಾರ್ಥಿಗಳು ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡುವದಕ್ಕೆ ಪೌಲನೊಂದಿಗೆ ಕೂಡಿಕೊಳ್ಳುವ ವೇಳೆ ದೇವರೊಂದಿಗೆ ಹೆಚ್ಚು ನಿಕಟವಾಗಿ ನಡೆಯುವಂತೆ ಈ ಪತ್ರಿಕೆಗಳನ್ನು ಶ್ರದ್ಧೆಯಿಂದ ಓದುವಂತೆ ಪುನಃ ಪುನಃ ಈ ಪತ್ರಿಕೆಗಳ ಕಡೆಗೆ ಸೆಳೆಯಲ್ಪಡುವರು (ನೋಡಿರಿ 1 ತಿಮೊಥೆ 6:12; 2 ತಿಮೊಥೆ 4:7).


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

1 ಮತ್ತು 2 ತಿಮೊಥೆ ಮತ್ತು ತೀತನಿಗೆ ರವರು ಬರೆದಿರುವ ಡೇವಿಡ್‌ ರೋಪರ್‌ (David Roper) ಪುಸ್ತಕದ ಡಿಜಿಟಲ್ ಪ್ರತಿಯು ಕೋರ್ಸಿನ ನಿಮ್ಮ ಅಧ್ಯಾಪಕರಾಗಿರುತ್ತಾರೆ, ಮತ್ತು ಕೋರ್ಸ್ ಮುಗಿದ ಬಳಿಕವೂ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.