ಮಾದರಿ ಕೋರ್ಸ್ ವಿಷಯ

kn-Overview-Cutoff

ಹಂತ ಹಂತವಾಗಿ ಆಯೋಜಿಸುವುದು

ಮುಂದಿನ ಹಂತ ಏನು ಎಂಬುದು ಯಾವಾಗಲೂ ನಿಮಗೆ ತಿಳಿದಿರುವಂತೆ ಪ್ರತಿ ಕೋರ್ಸನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಕೋರ್ಸಿನೊಳಗೆ ಪ್ರತಿ ಪುಟದಲ್ಲಿ  ಸ್ಥೂಲ ಚಿತ್ರಣದ ಬಾಕ್ಸ್ ಇರುತ್ತದೆ, ಇದನ್ನು ನೋಡಿದ ಕ್ಷಣವೇ ನೀವು ಯಾವ ಹಂತದಲ್ಲಿದ್ದೀರಿ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ. ನೀವು ಕೋರ್ಸಿನಲ್ಲಿ ದಾಖಲಾಗಿರುವಾಗ ನೀವು ಹಿಂದಿನ ಯಾವುದೇ ಹಂತಕ್ಕೆ ಪುನಃ ಭೇಟಿ ನೀಡಬಹುದು.

ಡೌನ್‍ಲೋಡ್ ಮಾಡಬಹುದಾದ ಅಧ್ಯಯನ ಪಠ್ಯ

ದೇವರು ಹೇಗೆ ಬೈಬಲ್ ನಲ್ಲಿನ ಬರಹಗಳ ಮುಖಾಂತರ ನಮ್ಮೊಂದಿಗೆ ಮಾತನಾಡುತ್ತಾರೋ, ಅದೇ ರೀತಿ ಥ್ರೂ ದ ಸ್ಕ್ರಿಪ್ಚರ್ಸ್ ಮೂಲಭೂತವಾಗಿ ಓದು-ಆಧರಿತ ಶಾಲೆ.  ಪ್ರತಿ ಕೋರ್ಸ್ ಟ್ರೂತ್ ಫಾರ್ ಟುಡೇ ವಿವರಣ ಮಾಲಿಕೆಯ ಒಂದು ಸಂಪುಟವನ್ನು ಅನುಸರಿಸುತ್ತದೆ. ಇದು ಡಿಜಿಟಲ್ ರೂಪದಲ್ಲಿ ಲಭ್ಯವಿದ್ದು, ಪ್ರತಿಯೊಂದು ಸಂಪುಟವು ಕೋರ್ಸಿನುದ್ದಕ್ಕೂ ನಿಮ್ಮ “ಅಧ್ಯಯನ ಪಠ್ಯ”ವಾಗಿರುತ್ತದೆ ಮತ್ತು ಕೋರ್ಸ್ ಮುಗಿದ ಬಳಿಕ ಅದನ್ನು ನಿಮ್ಮೊಡನೆ ಇಟ್ಟುಕೊಳ್ಳಬಹುದು! ಮೊದಲ ಕೋರ್ಸ್ ಕ್ರಿಸ್ತನ ಜೀವನ, 1 ರಿಂದ ಸಣ್ಣ ಮಾದರಿ ಅಧ್ಯಯನ ಪಠ್ಯವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗೆ ಕ್ಲಿಕ್ ಮಾಡಿ.

ಮಾದರಿ ಅಧ್ಯಯನ ಪಠ್ಯವನ್ನು ಡೌನ್‍ಲೋಡ್ ಮಾಡಿ

 

ಅಧ್ಯಯನ ಗೈಡ್‍ಗಳು

ಅಧ್ಯಯನ ಪಠ್ಯವನ್ನು ಐದು ಓದುವ ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು ಪ್ರತಿ ವಿಭಾಗದ ಕೊನೆಯಲ್ಲಿ ಒಂದು ಪರೀಕ್ಷೆ ಇರುತ್ತದೆ. ಪರೀಕ್ಷೆಗಳಿಗೆ ಓದಲು ನಿಮಗೆ ಸಹಾಯವಾಗುವಂತೆ, ನಿಮಗೆ ತಿಳಿದಿರಬೇಕಾದ ಪ್ರಮುಖ ಶಬ್ದಗಳು ಮತ್ತು ಪರಿಕಲ್ಪನೆಗಳನ್ನು ಗುರುತಿಸಲು ಪ್ರತಿ ಓದುವ ವಿಭಾಗದ ಜೊತೆಗೆ ಅಧ್ಯಯನ ಗೈಡ್ ಇರುತ್ತದೆ. ಕ್ರಿಸ್ತನ ಜೀವನ, 1 ರಿಂದ ಮೊದಲ ಅಧ್ಯಯನ ಗೈಡ್ ಅನ್ನು ಡೌನ್‍ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ.

ಮಾದರಿ ಅಧ್ಯಯನ ಗೈಡನ್ನು ಡೌನ್‍ಲೋಡ್ ಮಾಡಿ

 

ಅಧ್ಯಯನ ನೆರವು

ಕೆಲವು ಕೋರ್ಸುಗಳಲ್ಲಿ ಮ್ಯಾಪ್‍ಗಳು ಮತ್ತು ಚಾರ್ಟ್‍ಗಳಂಥ ಹೆಚ್ಚುವರಿ ಡೌನ್‍ಲೋಡ್‍ಗಳು ಲಭ್ಯವಿವೆ ಮತ್ತು ಇವು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಗುತ್ತವೆ. ಕ್ರಿಸ್ತನ ಜೀವನ, 1 ರಿಂದ ಒಂದು ಅಧ್ಯಯನ ನೆರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಕೆಳಗೆ ಕ್ಲಿಕ್ ಮಾಡಿ.

ಮಾದರಿ ಅಧ್ಯಯನ ನೆರವನ್ನು ಡೌನ್‍ಲೋಡ್ ಮಾಡಿ

 

ಪರೀಕ್ಷೆಗಳು

ಐದು ಕಿರು ಪರೀಕ್ಷೆಗಳು ಮತ್ತು ಒಂದು ಅಂತಿಮ, ಸಮಗ್ರ ಪರೀಕ್ಷೆ ಇರುತ್ತದೆ, ಮತ್ತು ನಿಮಗೆ ಅನುಕೂಲವಾದಾಗಲೆಲ್ಲ ನೀವು ಪ್ರತಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪರೀಕ್ಷೆಯಲ್ಲಿ ಕೆಳಗಿನ ಮಾದರಿಯಲ್ಲಿ ತೋರಿಸಿರುವ ಅದೇ ಪ್ರಕಾರದ ಸುಮಾರು ಐವತ್ತು ಪ್ರಶ್ನೆಗಳಿರುತ್ತವೆ. ಪರೀಕ್ಷೆಗಳಿಗೆ ಅಂಕ ನೀಡಲಾಗುತ್ತದೆ, ಮತ್ತು ನೀವು ಪ್ರತಿ ಪರೀಕ್ಷೆಯನ್ನು ಮುಗಿಸಿದ ಕ್ಷಣವೇ ಫಲಿತಾಂಶಗಳನ್ನು ತೋರಿಸಲಾಗುವುದು.   kn-Test-Cutoff

ಕ್ರಿಸ್ತನ ಜೀವನ, 1 ರಲ್ಲಿ ದಾಖಲಾತಿ ಪಡೆಯಿರಿ