ನಮ್ಮ ಶಾಲೆಗೆ ಸ್ವಾಗತ

ನಿಮ್ಮನ್ನು ಇಲ್ಲಿ ಭೇಟಿಯಾಗಲು ಮತ್ತು ThroughTheScriptures.com ಮೂಲಕ ನಿಮ್ಮನ್ನು ಸ್ವಾಗತಿಸಲು ನಮಗೆ ಅತೀವ ಸಂತೋಷವಾಗುತ್ತದೆ. ಈ ಪ್ರಯಾಣವು ನಿಮಗೆ ಆಸಕ್ತಿಕರವಾಗಿರುತ್ತದೆ, ಮಾಹಿತಿ ಪೂರ್ಣವಾಗಿರುತ್ತದೆ ಮತ್ತು ತೃಪ್ತಿ ತರುತ್ತದೆ ಎಂಬ ಬಗ್ಗೆ ನಮಗೆ ಭರವಸೆ ಇದೆ. ಮತ್ತಾಯ 28 ರಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳುತ್ತಾನೆ, “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ.” ಹೊರಟುಹೋಗಿ ಎಂಬ ಆಜ್ಞೆಯು ವಿವಿಧ ರೀತಿಗಳಲ್ಲಿ ನೆರವೇರಿದೆ. ಆರಂಭದಲ್ಲಿ, ಹೊರಟುಹೋಗಿ ಎಂಬ ಆಜ್ಞೆಯು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಿ ಸಂದೇಶವನ್ನು ಸಾರುವುದರ ಮೂಲಕ ನೆರವೇರಿತು. ಬಳಿಕ, ದೇವರ ವಾಕ್ಯವನ್ನು ಜನರ ಬಳಿಗೆ ಒಯ್ಯಲು ಕೆಲವರು ಹಡಗುಗಳಲ್ಲಿ ಪಯಣಿಸಿ ಒಂದು ತೀರದಿಂದ ಇನ್ನೊಂದು ತೀರಕ್ಕೆ ಸಾಗಿದರು. ಇನ್ನು ಕೆಲವರು ಪತ್ರಗಳನ್ನು ಬರೆದು ಸಂದೇಶವಾಹಕರ ಮುಖಾಂತರ ರವಾನಿಸಿದರು ಮತ್ತು ಅಲ್ಲಿ ಅವರು ಅವುಗಳನ್ನು ಗಟ್ಟಿಯಾಗಿ ಓದಿದರು. ಕೆಲವು ಸಮಯದ ಬಳಿಕ, ನಮಗೆ-ಬೈಬಲ್, ಟಿಪ್ಪಣಿಗಳು ಮತ್ತು ಇತರ ಬೈಬಲ್ ಪಠ್ಯಗಳು ದೊರೆತವು ಮತ್ತು ಅವುಗಳನ್ನು ಪ್ರಪಂಚದ ಎಲ್ಲಾ ಭಾಗಗಳಿಗೆ ವಿತರಿಸಲಾಯಿತು ಮತ್ತು ಜನರು ಯೇಸುವಿನ ಬಗ್ಗೆ ತಿಳಿದುಕೊಳ್ಳಲು ಸಹಾಯವಾಯಿತು. ಇಂದು, ಆನ್ಲೈನ್ ಬೈಬಲ್ ಅಧ್ಯಯನದ ಮುಖಾಂತರ ನಾವು ಪ್ರಪಂಚದೆಲ್ಲೆಡೆಯಿರುವವರ ಮನೆಗಳನ್ನು ಮತ್ತು ಹೃದಯಗಳನ್ನು ತಲುಪಲು ಸಾಧ್ಯವಾಗಿದೆ.

ThroughTheScriptures.com ಹೆಸರಾಂತ ಬೈಬಲ್ ಪರಿಣತರು ಸಿದ್ಧಪಡಿಸಿದ ಬೈಬಲ್ ಅಧ್ಯಯನ ಸಾಮಗ್ರಿಗಳನ್ನು ಪ್ರಸ್ತುತಪಡಿಸುತ್ತದೆ. ಹೊಸ ಒಡಂಬಡಿಕೆ ಮತ್ತು ಹಳೆ ಒಡಂಬಡಿಕೆಯಲ್ಲಿರುವ ಪ್ರತಿಯೊಂದು ಪುಸ್ತಕವನ್ನು ಓದುವ ಅಗತ್ಯ ಏನಿದೆ ಎಂಬುದಕ್ಕೆ ಸ್ಪಷ್ಟವಾದ ಮತ್ತು ತಾರ್ಕಿಕವಾದ ಅರ್ಥವನ್ನು ನೀಡುತ್ತದೆ. ಇದು ವಿಶಿಷ್ಟವಾದುದು ಏಕೆಂದರೆ ಇಪ್ಪತ್ತಮೂರು ವಿವಿಧ ಭಾಷೆಗಳಲ್ಲಿ ಬೈಬಲ್ ಬಗ್ಗೆ ಆಳವಾದ ನೈಜ ಅಧ್ಯಯನದ ಅವಕಾಶವನ್ನು ಇದು ಕಲ್ಪಿಸುತ್ತದೆ. ThroughTheScriptures.com ಅಮೂಲ್ಯವಾದುದು. ಸಣ್ಣ ಮೊತ್ತದ ನೋಂದಣಿ ಶುಲ್ಕದೊಂದಿಗೆ, ನೀವು ಯೋಗ್ಯವಾದ ಬೈಬಲ್ ಅಧ್ಯಯನ ಸಾಮಗ್ರಿ, ಅದಕ್ಕೆ ಸಂಬಂಧಿಸಿದ ನುರಿತ ಟಿಪ್ಪಣಿ, ಆ ಸಾಮಗ್ರಿಯನ್ನು ನೀವು ಎಷ್ಟು ಚೆನ್ನಾಗಿ ಕಲಿಯುತ್ತಿದ್ದೀರಿ ಎಂಬುದನ್ನು ತಿಳಿಯಲು ನಿಮಗೆ ಸಾಧ್ಯವಾಗುವಂತೆ ಸ್ವ-ಮೌಲ್ಯಮಾಪನದ ಅಭ್ಯಾಸಗಳು, ಮತ್ತು ಪ್ರತಿ ಕೋರ್ಸ್ ಮುಗಿದ ಬಳಿಕ ಪ್ರಮಾಣಪತ್ರವನ್ನು ಪಡೆಯುವಿರಿ. ನಂತರ ಕೊನೆಗೆ, ನೀವು ನಿಮ್ಮ ಬಳಿ ಅಮೂಲ್ಯವಾದ ಬಿಬ್ಲಿಕಲ್ ರೆಫರೆನ್ಸ್ ಲೈಬ್ರರಿಯನ್ನು ಹೊಂದುವಿರಿ. ಅದಕ್ಕಿಂತಲೂ ಹೆಚ್ಚಾಗಿ, ಕೇವಲ ದೇವರ ಬಗ್ಗೆ ತಿಳಿಯುವುದಷ್ಟೇ ಅಲ್ಲ, ThroughTheScriptures.com ದೇವರ ವಾಕ್ಯದೊಂದಿಗೆ ಜೀವಿಸಲು, ದೇವರ ಸತ್ಯದೊಂದಿಗೆ ಜೀವಿಸಲು ಮತ್ತು ದೇವರ ಕೃಪೆಯೊಂದಿಗೆ ಜೀವಿಸಲು ಪ್ರೋತ್ಸಾಹ ನೀಡುತ್ತದೆ. ಅದನ್ನು ಮಾಡುವ ಮೂಲಕ, ದೇವರು ಈ ಭೂಮಿಯಲ್ಲಿ ಸಮೃದ್ಧ ಮತ್ತು ತೃಪ್ತಿಕರ ಜೀವನದ ಮತ್ತು ಇಲ್ಲಿ ನಮ್ಮ ಕಾಲ ಮುಗಿದ ಬಳಿಕ ಸ್ವರ್ಗದಲ್ಲಿ ನಿತ್ಯಜೀವದ ವಾಗ್ದಾನ ಮಾಡುತ್ತಾರೆ. ThroughTheScriptures.com ನೊಂದಿಗೆ ನೀವು ನಮ್ಮೊಂದಿಗೆ ಇದ್ದೀರಿ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗುತ್ತದೆ, ಮತ್ತು ಈ ಪ್ರಯಾಣದಲ್ಲಿ ದೇವರ ಆಶೀರ್ವಾದವು ನಿಮ್ಮೊಂದಿಗಿರಲಿ ಎಂದು ಬಯಸುತ್ತೇವೆ.

  • ವೈಯಕ್ತಿಕ ಆಯ್ಕೆ
  • ವೈಯಕ್ತಿಕ ಆಯ್ಕೆ
  • ಯಾವುದೇ ಸಮಯದಲ್ಲಿ, ಯಾವುದೇ ಪುಸ್ತಕವನ್ನು ಆರಿಸಿ! ನಿಮ್ಮ ಕುತೂಹಲವನ್ನು ಕೆರಳಿಸಿರುವ ಬೈಬಲ್‍ನ ಒಂದು ನಿರ್ದಿಷ್ಟ ಪುಸ್ತಕದ ಕುರಿತು ಆಳವಾಗಿ ಅರಿತುಕೊಳ್ಳಲು ನಮ್ಮ ವೈಯಕ್ತಿಕ ಕೋರ್ಸುಗಳು ಪರಿಪೂರ್ಣ ಅವಕಾಶ ಕಲ್ಪಿಸುತ್ತವೆ.
  • ಸೆಮಿಸ್ಟರ್ ಅಧ್ಯಯನಗಳು
  • ಸೆಮಿಸ್ಟರ್ ಅಧ್ಯಯನಗಳು
  • ಮೊದಲಿನಿಂದ ಕೊನೆಯವರೆಗೆ ಇಡಿ ಬೈಬಲನ್ನು ಅಧ್ಯಯನ ಮಾಡಿ. ಬೈಬಲಿನ ಪ್ರತಿಯೊಂದು ಪುಸ್ತಕದ ಬಗ್ಗೆ ಆಳವಾದ ವಿಶ್ಲೇಷಣೆ ಒದಗಿಸುವ ಕ್ರಮಬದ್ಧ ಕೋರ್ಸುಗಳೊಂದಿಗೆ, ನಮ್ಮ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಕಲಿಯಲು ಸೂಕ್ತ ವೇದಿಕೆ ಒದಗಿಸುತ್ತದೆ.
  • ಶಾಲೆಯನ್ನು ಆರಂಭಿಸುವುದು ಹೇಗೆ
  • ಶಾಲೆಯನ್ನು ಆರಂಭಿಸುವುದು ಹೇಗೆ
  • ಇತರರೊಂದಿಗೆ ಬೈಬಲ್ ಅಭ್ಯಸಿಸಲು ಬಯಸುತ್ತೀರಾ? ಒಂದು ಗುಂಪನ್ನು ರಚಿಸಿಕೊಳ್ಳಿ ಮತ್ತು ನಿಮ್ಮ ಬೈಬಲ್ ಜ್ಞಾನವನ್ನು ಜೊತೆಯಾಗಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಅಧ್ಯಯನ ಗುಂಪನ್ನು ರಚಿಸುವುದಕ್ಕೆ ಸಂಬಂಧಿಸಿದ ನಮ್ಮ ಸಲಹೆಗಳು ಹಾಗೂ ಅತ್ಯುತ್ತಮ ಅನುಷ್ಠಾನ ವಿಧಾನಗಳನ್ನು ಕಲಿತುಕೊಳ್ಳಿ.

ತ್ರೂ ದ ಸ್ಕ್ರಿಪ್ಚರ್ಸ್ ಅನ್ನು ಅಧ್ಯಯನ ಮಾಡುವುದು

ತ್ರೂ ದ ಸ್ಕ್ರಿಪ್ಚರ್ಸ್ ನ ಉದ್ದೇಶವೇನೆಂದರೆ ಜಗತ್ತಿನೆಲ್ಲೆಡೆ ಇರುವ ಎಲ್ಲಾ ಜನರಿಗೆ ಬೈಬಲ್ ಬೋಧನೆ ಲಭ್ಯವಾಗುವಂತೆ ಮಾಡುವುದು. ಬೈಬಲ್ ಏನು ಹೇಳುತ್ತದೆ ಎಂಬುದನ್ನು ತಿಳಿಯಬಯಸುವ ಯಾರೇ ಆದರೂ ಕಲಿಯುವ ಅವಕಾಶಕ್ಕೆ ಅರ್ಹರಾಗುತ್ತಾರೆ. ನಮ್ಮ ಕೋರ್ಸುಗಳನ್ನು 23 ಭಾಷೆಗಳಲ್ಲಿ ಲಭ್ಯವಾಗಿಸುವ ಮುಖಾಂತರ ವಿಶ್ವದೆಲ್ಲೆಡೆಯ ಜನರಿಗೆ ಈ ಅವಕಾಶವನ್ನು ದೊರಕಿಸಿ ಕೊಡುವುದು ನಮ್ಮ ಗುರಿ. ನಮ್ಮ ಕೋರ್ಸುಗಳಿಗೆ ಆಗುವ ದಾಖಲಾತಿಯ ಮೂಲಕ ಸಿಗುವ ಪ್ರತಿಯೊಂದು ಡಾಲರ್ ಅನ್ನು ಈ ಮೇಲಿನ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತದೆ.

ಟಿಟಿಎಸ್ ವಿದ್ಯಾರ್ಥಿವೇತನ ಕಾರ್ಯಕ್ರಮ

ಉಚಿತ ವಿದ್ಯಾರ್ಥಿವೇತನಕ್ಕಾಗಿ ಇಲ್ಲಿ ಕ್ಲಿಕ್
ವ್ಯಕ್ತಿಗತ ಅಧ್ಯಯನಕ್ಕೋ ಅಥವಾ ಬೈಬಲಾಧಾರಿತ ಅಧ್ಯಯನ ಕೇಂದ್ರವೋ

ಅಮೆರಿಕದ ಹೊರಗಿನವರಿಗೆ ಮಾತ್ರವೇ