ವಿದ್ಯಾರ್ಥಿವೇತನಕ್ಕಾಗಿ ಮನವಿ ಪತ್ರ

ಪ್ರಾಮುಖ್ಯವಾದ ಮಾರ್ಗಸೂಚಿಗಳು

ನಮ್ಮ ವಿದ್ಯಾರ್ಥಿವೇತನ ಕಾರ್ಯಕ್ರಮವು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಇಡೀ ಬೈಬಲ್ ಮುಖಾಂತರವಾಗಿ ಕರೆದುಕೊಂಡು ಹೋಗುವದಕ್ಕೆ ವಿನ್ಯಾಸಿಸಲ್ಪಟ್ಟಿದೆ. ವಿದ್ಯಾರ್ಥಿವೇತನ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು “ಕ್ರಿಸ್ತನ ಜೀವನ, 1” ಎಂಬುದದರೊಂದಿಗೆ ಆರಂಭಿಸುವದು ಕಡ್ಡಾಯವಾಗಿದೆ.

*ನೀವು ನಿಮ್ಮ ಪ್ರಾಂತ್ಯದಲ್ಲಿ ಒಂದು ಶಾಲೆಯನ್ನು ಆರಂಭಿಸುತ್ತಿರುವದಾದರೆ ಮತ್ತು ನೀವು ಆ ಶಾಲೆಯ ಸಂಘಟಕ ಹಾಗೂ ನಾಯಕನಾಗಿರುವದಾದರೆ, ನಿಮ್ಮನ್ನು “ಪ್ರಾಂಶುಪಾಲ” ಎಂದು ಕರೆಯಲಾಗುತ್ತದೆ. ಮಿಕ್ಕ ಎಲ್ಲರೂ ವಿದ್ಯಾರ್ಥಿ ಎಂದು ಕರೆಯಲ್ಪಡುವರು.

ಹೇಗೆ ದಾಖಲಿಸಿಕೊಳ್ಳಬೇಕು:

  1. ನಿಮ್ಮ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಿರಿ, “ಪ್ರಾಂಶುಪಾಲ” ಅಥವಾ “ವಿದ್ಯಾರ್ಥಿ”
  2. ನೊಂದಾವಣೆ ಪಾರ್ಮನ್ನು ಭರ್ತಿ ಮಾಡಿರಿ ಮತ್ತು “ಒಪ್ಪಿಸು” ಎಂಬದರ ಮೇಲೆ ಕ್ಲಿಕ್ ಮಾಡಿರಿ.

ನೀವು ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿದ ಬಳಿಕ, ನಿಮ್ಮನ್ನು ನಿಮ್ಮ ಮೊದಲನೆಯ ವ್ಯಾಸಂಗಮಾಲೆ ಆಗಿರುವ ಕ್ರಿಸ್ತನ ಜೀವನ, 1 ಎಂಬುದರ ಕಡೆಗೆ ನಡಿಸಲಾಗುವದು. ನೀವು ಈ ವ್ಯಾಸಂಗಮಾಲೆಯನ್ನು ಯಶಸ್ವಿಯಾಗಿ ಮುಗಿಸಿದ್ದಾದ ಮೇಲೆ, ನೀವು ದಾರಾಳವಾಗಿ ಮುಂದಿನ ವ್ಯಾಸಂಗಮಾಲೆಯಾಗಿರುವ ಕ್ರಿಸ್ತನ ಜೀವನ, 2ಕ್ಕೆ ಸಾಗಬಹುದು.
ಗಮನಿಸಿರಿ: ನಿಮ್ಮ ಮೊದಲ ವ್ಯಾಸಂಗಮಾಲೆಗಾಗಿ ನಿಮ್ಮನ್ನು ನೊಂದಾಯಿಸಿಕೊಂಡಾದ ಮೇಲೆ, ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ನೊಂದಾಯಿಸಿಕೊಂಡರೆ, ಮುಂದಿನ ಎಲ್ಲಾ ವ್ಯಾಸಂಗಮಾಲೆಗಳನ್ನು ನೀವು ಆಂಗ್ಲದಲ್ಲಿ ಮಾತ್ರವೇ ತೆಗೆದುಕೊಳ್ಳಲು ಶಕ್ತರಾಗುವಿರಿ. ನೀವು ಬಹುಭಾಷೆಗಳಲ್ಲಿ ವ್ಯಾಸಂಗಮಾಲೆಗಳನ್ನು ತೆಗೆದುಕೊಳ್ಳಲು ಇಚ್ಛಿಸುವದಾದರೆ, ನೀವು ಪ್ರತಿಯೊಂದು ಭಾಷೆಗೆ ಒಂದು ಪ್ರತ್ಯೇಕವಾದ ದಾಖಲೆಯನ್ನು ಏರ್ಪಡಿಸಿಕೊಳ್ಳಬೇಕಾಗುತ್ತದೆ. ನಿಮ್ಮ ವ್ಯಾಸಂಗಮಾಲೆಯ ಪ್ರಗತಿ, ಕ್ರಮಾಂಕಗಳು, ಮತ್ತು ಪ್ರತಿಲೇಖನಗಳನ್ನು ಒಂದುಗೂಡಿಸಲ್ಪಡುವದಿಲ್ಲ ಎಂಬುದನ್ನು ದಯವಿಟ್ಟು ಗಮನಿಸತಕ್ಕದ್ದು.




ಯು.ಎಸ್ನ ಹೊರಗೆ ಮಾತ್ರ ಬಳಕೆದಾರರು ವಿದ್ಯಾರ್ಥಿವೇತನವನ್ನು ಪಡೆಯಬಹುದು