ಬಳಕೆಗೆ ಸಂಬಂಧಿಸಿದ ಷರತ್ತುಗಳು

ThroughTheScriptures.com (“ವೆಬ್ಸೈಟ್”) ಗೆ ಸಂಬಂಧಿಸಿದ ಸಾಫ್ಟ್ ವೇರ್, ಪಠ್ಯ ಸಾಮಗ್ರಿಗಳು,  ಇಂಟರಾಕ್ಟಿವ್ ಗುಣವಿಶೇಷತೆಗಳು, ಮತ್ತು ವೆಬ್ಸೈಟ್ ಅನ್ನು ಉಪಯೋಗಿಸುವುದರಿಂದ ಅಥವಾ ಇತರರಿಗೆ ಉಪಯೋಗಿಸಲು ಅವಕಾಶ ಮಾಡಿಕೊಡುವುದರಿಂದ, ನೀವು (“ಬಳಕೆದಾರರು”) ಈ ಕಾನೂನಾತ್ಮಕ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ (” ಕರಾರು”) ಒಳಗಾಗಲು ಒಪ್ಪುತ್ತೀರಿ.  ವೆಬ್ಸೈಟ್‍ನೊಂದಿಗೆ ಯಾವುದೇ ವಿಧಾನದಲ್ಲಿ ಇಂಟರಾಕ್ಟ್ ಮಾಡುತ್ತಿರುವ ಯಾವನೇ ವ್ಯಕ್ತಿಯು ಈ ಕರಾರಿನ ಉದ್ದೇಶಗಳಿಗಾಗಿ ಬಳಕೆದಾರನೆಂದೆನಿಸಿಕೊಳ್ಳುತ್ತಾನೆ. ಈ ಕರಾರಿನ ಷರತ್ತುಗಳು ಮತ್ತು ನಿಬಂಧನೆಗಳಿಗೆ ನೀವು ಒಪ್ಪದಿದ್ದರೆ, ನಿಮಗೆ ವೆಬ್ಸೈಟ್ ಬಳಸುವ  ಅವಕಾಶ ಇರುವುದಿಲ್ಲ. ವೆಬ್ಸೈಟ್, ವೆಬ್ಸೈಟ್‍ನಲ್ಲಿರುವ ಯಾವುದೇ ವಿಷಯದ ಬಗ್ಗೆ, ಅಥವಾ ಈ ಕರಾರಿನ ಷರತ್ತುಗಳು ಮತ್ತು ನಿಬಂಧನೆಗಳ ಕುರಿತು ನಿಮಗೆ ಅತೃಪ್ತಿ ಇದ್ದಲ್ಲಿ, ನಿಮಗೆ ಲಭ್ಯವಿರುವ ಏಕಮಾತ್ರ ಮತ್ತು ಅಂತಿಮ ದಾರಿಯೆಂದರೆ ಈ ವೆಬ್ಸೈಟ್ ಬಳಕೆಯನ್ನು ನಿಲ್ಲಿಸುವುದು ಎಂಬುದನ್ನು ನೀವು ಒಪ್ಪಿಕೊಳ್ಳುವುದು. ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೀವು ವೆಬ್ಸೈಟ್ ಅನ್ನು ಬಳಸುತ್ತೀರಿ ಎಂಬುದನ್ನು ನೀವು ತಿಳಿದಿರಬೇಕು ಮತ್ತು ಒಪ್ಪಿಕೊಳ್ಳಬೇಕು. ನಿಮ್ಮ ಅಥವಾ ನೀವು ಪ್ರತಿನಿಧಿಸುವ ಯಾವುದೇ ಪಾರ್ಟಿಯ ಪರವಾಗಿ ಈ ಕರಾರನ್ನು ಒಪ್ಪಿಕೊಳ್ಳಲು ನಿಮಗೆ ಕಾನೂನಾತ್ಮಕ ಸಾಮರ್ಥ್ಯ ಮತ್ತು ಅಧಿಕಾರವಿದೆಯೆಂಬುದನ್ನು ನೀವು ಪ್ರತಿನಿಧಿಸುತ್ತೀರಿ. ಈ ಕರಾರಿನ ಕೆಲವು ಷರತ್ತುಗಳು ನಿಮ್ಮ ವೆಬ್ಸೈಟ್ ಬಳಕೆಗೆ ಅನ್ವಯವಾಗದಿರಬಹುದು; ಆದರೂ ಅನ್ವಯವಾಗುವ ಎಲ್ಲಾ ಷರತ್ತುಗಳು ಕಡ್ಡಾಯವಾಗಿ ಜಾರಿಯಲ್ಲಿರುತ್ತವೆ.  ವೆಬ್ಸೈಟ್‍ನ ನ್ಯಾಯಸಮ್ಮತ ಮಾಲೀಕರಾಗಿರುವ, ಟ್ರೂತ್ ಫಾರ್ ಟುಡೆ ವರ್ಲ್ಡ್ ಮಿಶನ್ ಸ್ಕೂಲ್, ಇಂಕ್ (“ಟ್ರೂತ್ ಫಾರ್ ಟುಡೆ) ಇವರು ಯಾವುದೇ ಸಮಯದಲ್ಲಿ ಮತ್ತು ಕಾಲ ಕಾಲಕ್ಕೆ ಈ ಕರಾರಿನಲ್ಲಿ ಮಾಡಲಾದ ಮಾರ್ಪಾಡುಗಳನ್ನು ಅಥವಾ ಇದರಲ್ಲಿನ ಷರತ್ತುಗಳ ರದ್ದತಿಯ ಕುರಿತು ನಿಮಗೆ ಯಾವುದೇ ಸೂಚನೆ ನೀಡದೆ ಬದಲಾವಣೆಗಳನ್ನು ThroughTheScriptures.com ವೆಬ್ಸೈಟ್ ನಲ್ಲಿ   ಪೋಸ್ಟ್ ಮಾಡುವ ಸ್ವಯಂ ಮತ್ತು ಸ್ವತಂತ್ರ ಅಧಿಕಾರದ ಹಕ್ಕನ್ನು ಕಾಯ್ದುಕೊಳ್ಳುತ್ತದೆ. ಇಂತಹ ಯಾವುದೇ ಬದಲಾವಣೆಗಳನ್ನು ಇಲ್ಲಿ ಕೊಟ್ಟಂತೆ ಈ ಕರಾರಿನಲ್ಲಿ ಸೇರಿಸಲಾಗುವುದು.

ಸ್ಥಗಿತಗೊಳಿಸುವಿಕೆ. ಈ ಕರಾರನ್ನು ಸ್ಥಗಿತಗೊಳಿಸುವ ತನಕ ಅದು ಜಾರಿಯಲ್ಲಿರುತ್ತದೆ. ಇದನ್ನು ಟ್ರೂತ್ ಫಾರ್ ಟುಡೆಯ ಸ್ವಂತ ತೀರ್ಮಾನದ ಮೇರೆಗೆ ಹಾಗೂ ಮುಂಚಿತ ಸೂಚನೆ ನೀಡದೆ ಸ್ಥಗಿತಗೊಳಿಸಬಹುದು, ಅಥವಾ ಪಾರ್ಟಿಗಳ ನಡುವೆ ಪರಸ್ಪರ ಲಿಖಿತ ಒಪ್ಪಂದದೊಂದಿಗೆ ಸ್ಥಗಿತಗೊಳಿಸಬಹುದು, ಆದರೆ ಬಳಕೆದಾರರು ಇದನ್ನು ಸ್ಥಗಿತಗೊಳಿಸಲು ಆಗುವುದಿಲ್ಲ.  ಟ್ರೂತ್ ಫಾರ್ ಟುಡೆ, ಬಳಕೆದಾರರ ವೆಬ್ಸೈಟ್ ಉಪಯೋಗವನ್ನು ಪೂರ್ವ ಸೂಚನೆ ನೀಡದೆ ಮತ್ತು ಟ್ರೂತ್ ಫಾರ್ ಟುಡೆಯ ಸ್ವಯಂ ಹಾಗೂ ಸ್ವತಂತ್ರ ತೀರ್ಮಾನದ ಮೇರೆಗೆ ಅಮಾನತುಗೊಳಿಸಬಹುದು, ಸ್ಥಗಿತಗೊಳಿಸಬಹುದು ಅಥವಾ ತೆಗೆದುಹಾಕಬಹುದು. ಇಂತಹ ಯಾವುದೇ ಅಮಾನತುಗೊಳಿಸುವಿಕೆ, ಸ್ಥಗಿತಗೊಳಿಸುವಿಕೆ ಅಥವಾ ತೆಗೆದುಹಾಕುವಿಕೆ ಅಥವಾ ಅದರ ಪರಿಣಾಮಗಳಿಗೆ ಟ್ರೂತ್ ಫಾರ ಟುಡೆ ಜವಾಬ್ದಾರರಲ್ಲ, ಇದರ ಪರಿಣಾಮಗಳು ವ್ಯವಹಾರ ಮತ್ತು ಶಿಕ್ಷಣಕ್ಕೆ ಆಗುವ ಅಡ್ಡಿ, ಡೇಟಾ ಅಥವಾ ಸ್ವತ್ತು ಕಳೆದುಕೊಳ್ಳುವಿಕೆ, ಸ್ವತ್ತಿನ ಹಾನಿ, ಅಥವಾ ಯಾವುದೇ ಇತರ ತೊಂದರೆ, ನಷ್ಟ, ಅಥವಾ ಹಾನಿಯನ್ನೊಳಗೊಂಡಿರುತ್ತದೆ ಆದರೆ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ.   ವೆಬ್ಸೈಟ್ ಅನ್ನು ಬಳಸುತ್ತಿರುವ ನೀವು ಅಥವಾ ಯಾವುದೇ ಬೇರೆ ವ್ಯಕ್ತಿ ಅಥವಾ ಗುಂಪು ಈ ಕರಾರಿನ ಯಾವುದೇ ಸೌಲಭ್ಯಗಳನ್ನು ಉಲ್ಲಂಘಿಸಿದಲ್ಲಿ ಟ್ರೂತ್ ಫಾರ್ ಟುಡೆ ಈ ಕರಾರನ್ನು ಮತ್ತು ವೆಬ್ಸೈಟ್ ಗೆ ನಿಮ್ಮ ಪ್ರವೇಶಾವಕಾಶವನ್ನು ಏಕಪಕ್ಷೀಯವಾಗಿ ಮತ್ತು ಪೂರ್ವಸೂಚನೆ ನೀಡದೆ ಸ್ಥಗಿತಗೊಳಿಸಬಹುದು. ಯಾವುದೇ ಸ್ಥಗಿತಗೊಳಿಸುವಿಕೆಯಿಂದ ನೀವು ಅಥವಾ ಯಾವುದೇ ಮೂರನೇ ಪಾರ್ಟಿ ಎದುರಿಸುವ ಪರಿಣಾಮಗಳಿಗೆ ಟ್ರೂತ್ ಫಾರ್ ಟುಡೆ ಹೊಣೆಗಾರರಾಗಿರುವುದಿಲ್ಲ. ಸ್ಥಗಿತಗೊಳಿಸಿದ ಬಳಿಕ, ವೆಬ್ಸೈಟ್ ಬಳಸುತ್ತಿರುವ ನೀವು ಅಥವಾ ಯಾವುದೇ ಬೇರೆ ವ್ಯಕ್ತಿ ಅಥವಾ ಪಾರ್ಟಿ ಅವರ ಸ್ವಂತ ಖರ್ಚು ಮತ್ತು ವೆಚ್ಚದಲ್ಲಿ ವೆಬ್ಸೈಟ್ ಬಳಕೆಯನ್ನು ನಿಲ್ಲಿಸಬೇಕಾಗುತ್ತದೆ.

ಅಪ್ಡೇಟ್‍ಗಳು. ಕಾಲ ಕಾಲಕ್ಕೆ, ತನ್ನ ಇಚ್ಛೆಗನುಗುಣವಾಗಿ, ಟ್ರೂತ್ ಫಾರ್ ಟುಡೆ, ವೆಬ್ಸೈಟ್‍ನ ಅಪ್ಡೇಟ್ ಆಗಿರುವ ಆವೃತ್ತಿಗಳನ್ನು ರಚಿಸಬಹುದು. ಸ್ಪಷ್ಟವಾಗಿ ವಿಶದಪಡಿಸಿರದ ಹೊರತು, ಇಂತಹ ಯಾವುದೇ ಅಪ್ಡೇಟ್‍ಗಳು, ಈ ಕರಾರಿನ ಷರತ್ತುಗಳಿಗೆ ಒಳಪಟ್ಟಿರುತ್ತವೆ, ಇದರಲ್ಲಿ ಟ್ರೂತ್ ಫಾರ್ ಟುಡೆಯ ಸ್ವಯಂ ತೀರ್ಮಾನಕ್ಕನುಗುಣವಾಗಿ ನಿರ್ಧರಿಸಲಾದ ಈ ಕರಾರಿಗೆ ಮಾಡಿರುವ ಯಾವುದೇ ತಿದ್ದು ಪಡಿಗಳು ಸಹ ಸೇರಿರುತ್ತವೆ.

ಸ್ವಾಮ್ಯಕ್ಕೊಳಪಟ್ಟ ವಿಷಯಗಳು . ವಿನ್ಯಾಸ, ಪಠ್ಯ, ಗ್ರಾಫಿಕ್ಸ್, ಚಿತ್ರಗಳು, ವೀಡಿಯೊ, ಮಾಹಿತಿ, ಅಪ್ಲಿಕೇಷನ್‍ಗಳು, ಸಾಫ್ಟ್ ವೇರ್, ಸಂಗೀತ, ಧ್ವನಿ, ಮತ್ತು ಇತರ ಫೈಲ್‍ಗಳು, ಮತ್ತು ಅವುಗಳ ಆಯ್ಕೆ ಮತ್ತು ಸಂಯೋಜನೆ (“ಸೈಟ್ ಕಂಟೆಂಟ್”) , ಹಾಗೂ ವೆಬ್ಸೈಟ್‍ನಲ್ಲಿರುವ ಮತ್ತು ವೆಬ್ಸೈಟ್‍ಗೆ ಸಂಬಂಧಿಸಿದ ಎಲ್ಲ ಸಾಫ್ಟ್ ವೇರ್ ಮತ್ತು ವಿಷಯಗಳು ಕಾಪಿರೈಟ್, ಟ್ರೇಡ್ ಮಾರ್ಕ್, ಸರ್ವೀಸ್ ಮಾರ್ಕ್, ಪೇಟೆಂಟ್, ಟ್ರೇಡ್ ಸೀಕ್ರೆಟ್ಸ್ ಇವೆಲ್ಲವುಗಳ ಅಥವಾ ಬೇರೆ ಸ್ವಾಮ್ಯ ಸಂಬಂಧಿ ಹಕ್ಕುಗಳು ಮತ್ತು ಕಾನೂನಿನ ಸಂರಕ್ಷಣೆಗೊಳಪಟ್ಟಿವೆ.  ಇಂಥ ಕಂಟೆಂಟ್ ಅಥವಾ ವಿಷಯಗಳನ್ನು ಮಾರದಿರಲು, ಪರವಾನಿಗೆ ನೀಡದಿರಲು, ಬಾಡಿಗೆಗೆ ಕೊಡದಿರಲು, ಮಾರ್ಪಾಡು ಮಾಡದಿರಲು, ಹಂಚದಿರಲು, ಕಾಪಿ ಮಾಡದಿರಲು, ಪುನರುತ್ಪಾದಿಸದಿರಲು, ರವಾನಿಸದಿರಲು, ಸಾರ್ವಜನಿಕವಾಗಿ ಪ್ರದರ್ಶಿಸದಿರಲು, ಸಾರ್ವಜನಿಕವಾಗಿ ಉಪಯೋಗಿಸದಿರಲು, ಪ್ರಕಟಿಸದಿರಲು, ಮಾರ್ಪಡಿಸದಿರಲು, ತಿದ್ದುಪಡಿ ಮಾಡದಿರಲು ಅಥವಾ ಅವುಗಳಿಂದ ಬೇರೆ  ವಿಷಯಗಳನ್ನು ಸೃಷ್ಟಿಸದಿರಲು ನೀವು ಒಪ್ಪಬೇಕು. ಇಲ್ಲಿ ನೀಡಿದ ಕಾರಣಗಳ ಹೊರತು ಸಂಗ್ರಹಣೆ, ವಿಷಯ ಸಂಗ್ರಹಣೆ, ಮನರಂಜನೆ, ಡೇಟಾಬೇಸ್, ಅಥವಾ ವೆಬ್ಸೈಟ್ ವಿಷಯಗಳ ಡೈರೆಕ್ಟರಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ , ರಚಿಸಲು ಅಥವಾ ಸಂಗ್ರಹಿಸಲು ವೆಬ್ಸೈಟ್‍ನಿಂದ ಸುವ್ಯವಸ್ಥಿತವಾಗಿ ಡೇಟಾ ಅಥವಾ ಇತರ ವಿಷಯಗಳನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ.   ಇಲ್ಲಿ ಸ್ಪಷ್ಟವಾಗಿ ನಮೂದಿಸಿರದ ಯಾವುದೇ ಉದ್ದೇಶಗಳಿಗೆ ವೆಬ್ಸೈಟ್ ಕಂಟೆಂಟ್ ಅಥವಾ ವಿಷಯವನ್ನು ಬಳಸುವುದನ್ನು ನಿಷೇಧಿಸಲಾಗಿದೆ.

 ವಾರಂಟಿಯ ಹಕ್ಕು ನಿರಾಕರಣೆ. ವೆಬ್ಸೈಟ್ ಅನ್ನು ಅದು “ಇದ್ದ ಸ್ಥಿತಿಯಲ್ಲೇ” ಎಲ್ಲಾ ತಪ್ಪುಗಳೊಂದಿಗೆ ಮತ್ತು ಯಾವುದೇ ಬಗೆಯ ವಾರಂಟಿಯಿಲ್ಲದೆ ಒದಗಿಸಲಾಗಿದೆ.  ಟ್ರೂತ್ ಫಾರ್ ಟುಡೆ,  ವೆಬ್ಸೈಟ್ ಗೆ  ಸಂಬಂಧಿಸಿದ, ಎಕ್ಸ್ ಪ್ರೆಸ್, ಇಂಪ್ಲೈಡ್ ಅಥವಾ ಸ್ಟ್ಯಾಚುಟರಿ ಒಳಗೊಂಡಂತೆ ಎಲ್ಲಾ ವಾರಂಟಿಗಳ ಹಕ್ಕು ನಿರಾಕರಣೆ ಮಾಡುತ್ತದೆ ಮತ್ತು ತೃಪ್ತಿಕರ ಗುಣಮಟ್ಟ, ನಿರ್ದಿಷ್ಟ ಉದ್ದೇಶಕ್ಕೆ ಯೋಗ್ಯವಾಗಿರುವಿಕೆ, ನಿಖರತೆ,  ಶಾಂತವಾಗಿ ಆನಂದಿಸುವಿಕೆ ಮತ್ತು ಹಕ್ಕುನಿರಾಕರಣೆಯು ಮೂರನೇ ಪಾರ್ಟಿಯ ಹಕ್ಕುಗಳ ಉಲ್ಲಂಘನೆಯಾಗದಿರುವುದು ಇಂಥ ಮರ್ಚಂಟೆಬಿಲಿಟಿಯ ಇಂಪ್ಲೈಡ್ ವಾರಂಟಿಗಳಿಗೆ ಸೀಮಿತವಾಗಿರುವುದಿಲ್ಲ. ವೆಬ್ಸೈಟ್ ಯಾವುದೇ ನಿರ್ದಿಷ್ಟ ಸಮಯದಲ್ಲಿ ಅಥವಾ ಸ್ಥಳದಲ್ಲಿ ಲಭ್ಯವಿರುತ್ತದೆ, ಯಾವುದೇ ದೋಷಗಳು ಮತ್ತು ತಪ್ಪುಗಳನ್ನು ಸರಿಪಡಿಸುತ್ತದೆ, ಅಥವಾ ವೆಬ್ಸೈಟ್‍ನಲ್ಲಿನ ವಿಷಯಗಳು ವೈರಸ್ ಮುಕ್ತವಾಗಿದೆ ಅಥವಾ ಇತರ ಕೇಡುಂಟುಮಾಡುವ ಸಂಗತಿಗಳಿಂದ ಮುಕ್ತವಾಗಿದೆ ಎಂಬುದಾಗಿ ಟ್ರೂತ್ ಫಾರ್ ಟುಡೆ ವಾರಂಟಿ ಅಥವಾ ಗ್ಯಾರಂಟಿ ನೀಡುವುದಿಲ್ಲ ಅಥವಾ ಅಂಥ ಯಾವುದೇ ಚಿತ್ರಣ ನೀಡುವುದಿಲ್ಲ.  ವೆಬ್ಸೈಟ್ ನ ಗುಣಮಟ್ಟ, ಫಲಿತಾಂಶಗಳು ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿ ಹಾಗೂ ಎಲ್ಲಾ ಸೇವೆ, ರಿಪೇರಿ ಅಥವಾ ಸರಿಪಡಿಸುವಿಕೆಯ ಖರ್ಚುಗಳ ಹೊಣೆ ನಿಮ್ಮದಾಗಿರುತ್ತದೆ. ಟ್ರೂತ್ ಫಾರ್ ಟುಡೆ, ಅದರ ಪ್ರತಿನಿಧಿಗಳು, ಅಥವಾ ಅದರ ಉದ್ಯೋಗಿಗಳು ನೀಡಿರುವ ಮೌಖಿಕ ಅಥವಾ ಲಿಖಿತ ಮಾಹಿತಿ, ಸಲಹೆ ಅಥವಾ ಶಿಫಾರಸುಗಳು ವಾರಂಟಿ ಎಂದು ಎಣಿಸಲ್ಪಡುವುದಿಲ್ಲ ಮತ್ತು ಯಾವುದೇ ವಿಧದಲ್ಲಿ ಈ ಕರಾರಿನ ಪರಿಮಿತಿಯನ್ನು ಹೆಚ್ಚಿಸುವುದಿಲ್ಲ, ಮತ್ತು ನೀವು ಇಂತಹ ಯಾವುದೇ ಮಾಹಿತಿ, ಸಲಹೆ, ಸೂಚನೆ ಅಥವಾ ಶಿಫಾರಸುಗಳ ಮೇಲೆ ನಿರ್ಭರರಾಗಿರಕೂಡದು. ಕೆಲವು ನ್ಯಾಯವ್ಯಾಪ್ತಿಗಳು ನಿರ್ದಿಷ್ಟ ವಾರಂಟಿಗಳು ಮತ್ತು ಗ್ರಾಹಕ ಹಕ್ಕುಗಳನ್ನು ಕೈಬಿಡಲು ಅಥವಾ ಮಿತಿಗೊಳಿಸಲು ಅನುಮತಿ ನೀಡುವುದಿಲ್ಲ. ಅಂತಹ ಯಾವುದೇ ನ್ಯಾಯವ್ಯಾಪ್ತಿಯ ಕಾನೂನುಗಳು ನಿಮ್ಮ ವೆಬ್ಸೈಟ್ ಬಳಕೆಗೆ ಅನ್ವಯವಾಗುತ್ತಿದ್ದಲ್ಲಿ, ಕೆಲವೊಂದು ಹೊರಗಿಡುವಿಕೆಗಳು ಮತ್ತು ಮಿತಿಗಳು ನಿಮಗೆ ಅನ್ವಯವಾಗದಿರಬಹುದು.

ಬಾಧ್ಯತೆಯ ಮಿತಿ.

ಯಾವುದೇ ರೀತಿಯಲ್ಲೂ, ವೆಬ್ಸೈಟ್ ಬಳಕೆಯಿಂದಾಗಿ ಅಥವಾ ವೆಬ್ಸೈಟ್ ಬಳಸಲು ಸಾಧ್ಯವಾಗದೇ ಇರುವುದರಿಂದಾಗಿ; ಡೇಟಾವನ್ನು ಅನಧಿಕೃತವಾಗಿ ಅಥವಾ ಆಕಸ್ಮಿಕವಾಗಿ ಆಕ್ಸೆಸ್ ಮಾಡುವುದು ಅಥವಾ ಮಾರ್ಪಡಿಸುವುದರಿಂದಾಗಿ; ಯಾವುದೇ ಮೂರನೇ ಪಾರ್ಟಿಯ ಸ್ಟೇಟ್ ಮೆಂಟ್ಸ್ ಅಥವಾ ವರ್ತನೆಯಿಂದಾಗಿ; ಅಥವಾ ವೆಬ್ಸೈಟ್ ಬಳಕೆಗೆ ಸಂಬಂಧಿಸಿದ ಯಾವುದೇ ವಿಷಯದಿಂದಾಗಿ ಹಣ ಅಥವಾ ಆಸ್ತಿಯ ನಷ್ಟ, ವ್ಯವಹಾರದಲ್ಲಿ ತಡೆ, ವ್ಯವಹಾರ ಅವಕಾಶ ಕಳೆದುಕೊಳ್ಳುವಿಕೆ, ಡೇಟಾ ನಷ್ಟ, ಅಥವಾ ಯಾವುದೇ ಇತರ ತೊಂದರೆಗಳು, ಹಾನಿಗಳು ಅಥವಾ ನಷ್ಟಗಳು ಸೇರಿದಂತೆ, ಆದರೆ ಇವುಗಳಿಗೆ ಸೀಮಿತವಾಗದಂತೆ, ಸಂಭವಿಸುವ ಯಾವುದೇ ಪರೋಕ್ಷ, ವಿಶೇಷ, ಪರಿಣಾಮ-ಸ್ವರೂಪದ ಅಥವಾ ಸಾಂದರ್ಭಿಕ ಹಾನಿಗಳಿಗಾಗಿ, ಇಂತಹ ಹಾನಿಗಳ ಸಂಭಾವ್ಯತೆಯ ಬಗ್ಗೆ ಟ್ರೂತ್ ಫಾರ್ ಟುಡೆಗೆ ಸಲಹೆ ನೀಡಲಾಗಿದ್ದರೂ ಸಹ, ಟ್ರೂತ್ ಫಾರ್ ಟುಡೆ ಮತ್ತು ಅದರ ಡೈರೆಕ್ಟರುಗಳು, ಅಧಿಕಾರಿಗಳು, ಏಜೆಂಟರು, ಪಾಲುದಾರರು ಮತ್ತು ಸಹೋದ್ಯೋಗಿಗಳು ನಿಮಗೆ ಅಥವಾ ಯಾವುದೇ ಮೂರನೇ ಪಾರ್ಟಿಗೆ ಬಾಧ್ಯಸ್ಥರಾಗಿರುವುದಿಲ್ಲ. ಕೆಲವೊಂದು ಕಾನೂನುಗಳ ವ್ಯಾಪ್ತಿಗಳಲ್ಲಿ ನಿರ್ದಿಷ್ಟ ಪರಿಹಾರ ಕ್ರಮಗಳು ಅಥವಾ ಹಾನಿಗಳ ಹೊರತುಪಡಿಸುವಿಕೆ ಅಥವಾ ಸೀಮಿತಗೊಳಿಸುವಿಕೆಗೆ ಅವಕಾಶವಿರುವುದಿಲ್ಲ. ಅಂತಹ ಯಾವುದೇ ಕಾನೂನುಗಳು ನಿಮ್ಮ ವೆಬ್ಸೈಟ್ ಬಳಕೆಗೆ ಅನ್ವಯವಾಗುವಂತಹ ಸಂದರ್ಭದಲ್ಲಿ, ಕೆಲವು ಹೊರತುಪಡಿಸುವಿಕೆಗಳು ಮತ್ತು ಸೀಮಿತಗೊಳಿಸುವಿಕೆಗಳು ನಿಮಗೆ ಅನ್ವಯಿಸದಿರಬಹುದು.

 ನಷ್ಟ ಪರಿಹಾರ. ಬಳಕೆದಾರರು ಅಥವಾ ಯಾವುದೇ ಗ್ರಾಹಕರು, ಬಳಕೆದಾರರು, ವಿದ್ಯಾರ್ಥಿಗಳು ಅಥವಾ ಇತರರು ವೆಬ್ಸೈಟ್‍ನ ಸ್ವಾಧೀನತೆಯನ್ನು ಹೊಂದಿರುವುದರಿಂದ, ಬಳಸುವುದರಿಂದ ಅಥವಾ ಅದರ ಕಾರ್ಯಾಚರಣೆಯಿಂದ, ಅಥವಾ ಈ ಕರಾರಿನಲ್ಲಿ ವಿವರಿಸಿರುವ ವೆಬ್ಸೈಟ್‍ಗೆ ಸಂಬಂಧಿಸಿದ ಮಾಹಿತಿ ಪ್ರಸರಣದಿಂದ ಅಥವಾ ಪ್ರಸರಣದ ಕೊರತೆಯಿಂದ ಯಾವುದೇ ಆಸ್ತಿಗೆ ಉಂಟಾಗುವ ಹಾನಿ ಅಥವಾ ಯಾವುದೇ ಡೇಟಾ ನಷ್ಟಕ್ಕೆ ಸಂಬಂಧಿಸಿದ ಯಾವುದೇ ಹಾನಿಗಳು, ನಷ್ಟಗಳು ಅಥವಾ ಬಾಧ್ಯತೆಗಳೂ ಸೇರಿದಂತೆ ಆದರೆ ಇವುಗಳಿಗೆ ಸೀಮಿತವಾಗದಂತೆ, ಈ ಕರಾರಿನಿಂದ ಉಂಟಾಗುವ ಅಥವಾ ವೆಬ್ಸೈಟ್‍ನ ಯಾವುದೇ ರೀತಿಯ ಬಳಕೆಯ ಪರಿಣಾಮವಾಗಿ ತೆರಬೇಕಾದ ಅಟಾರ್ನಿಯ ಸಕಾರಣ ಶುಲ್ಕವೂ ಸೇರಿದಂತೆ, ಯಾವುದೇ ನಷ್ಟ, ಬಾಧ್ಯತೆ, ಕ್ಲೇಮು, ಬೇಡಿಕೆ, ಹಾನಿಗಳು, ಖರ್ಚುಗಳು ಮತ್ತು ವೆಚ್ಚಗಳಿಂದ ಟ್ರೂತ್ ಫಾರ್ ಟುಡೆ, ಅದರ ಅಂಗಸಂಸ್ಥೆಗಳು, ಸಹಸಂಸ್ಥೆಗಳು, ಮೂಲಸಂಸ್ಥೆ, ವಾರಸುದಾರರು ಮತ್ತು/ಅಥವಾ ನಿಯೋಜಿತರು ಮತ್ತು ಅದರ ಪ್ರತಿಯೊಬ್ಬ ಡೈರೆಕ್ಟರ್, ಅಧಿಕಾರಿ, ಏಜೆಂಟ್, ಕಂಟ್ರಾಕ್ಟರ್, ಪಾಲುದಾರ ಮತ್ತು ಉದ್ಯೋಗಿಯನ್ನು, ವೆಬ್ಸೈಟ್ ಬಳಕೆದಾರರಾಗಿರುವ ನೀವು ಬಾಧ್ಯತೆಯಿಂದ ಮುಕ್ತಗೊಳಿಸಲು ಮತ್ತು ಅವುಗಳ ವಿರುದ್ಧ ರಕ್ಷಿತರನ್ನಾಗಿಸಲು ಒಪ್ಪುತ್ತೀರಿ.

 ಕಾನೂನು ಮತ್ತು ವಿವಾದಗಳನ್ನು ಹತೋಟಿಯಲ್ಲಿಡುವುದು. ಈ ಕರಾರು, ಸ್ಟೇಟ್ ಆಫ್ ಆರ್ಕನ್ಸಾಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕಾನೂನು ನಿರ್ವಹಣೆಗೆ ಒಳಪಟ್ಟಿವೆ. ವೆಬ್ಸೈಟ್ ಬಳಕೆಯು ಅಂತಾರಾಜ್ಯ ಡೇಟಾ ಪ್ರಸರಣೆಯನ್ನು ಒಳಗೊಂಡಿದ್ದು ಇದನ್ನು ಫೆಡರಲ್ ಕಾನೂನುಗಳಡಿ ಅಂತಾರಾಜ್ಯ ವಾಣಿಜ್ಯ ವ್ಯವಹಾರ ಎಂಬುದಾಗಿ ಪರಿಗಣಿಸಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಒಪ್ಪಬೇಕು. ಈ ಕರಾರಿನ ನಿಮಿತ್ತ ಅಥವಾ ಅದಕ್ಕೆ ಸಂಬಂಧಿಸಿದಂತೆ ಪಾರ್ಟಿಗಳ ನಡುವಣ ಮಾತುಕತೆಯಿಂದ ಬಗೆಹರಿಸಲಾಗದ ಯಾವುದೇ ವಿವಾದ ಅಥವಾ ಕ್ಲೇಮು ಕಂಡುಬಂದಲ್ಲಿ , ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಆರ್ಕನ್ಸಾಸ್ ಸ್ಟೇಟ್ ನ ಪರಸ್ಪರ ಒಪ್ಪಿಗೆಯಿಂದ ನೇಮಕವಾದ ಮಧ್ಯವರ್ತಿಯ ಮೂಲಕ ವಿಶ್ವಾಸದಿಂದ ವಿವಾದವನ್ನು ಬಗೆಹರಿಸಲು ಪಾಟಿಗಳು ಪ್ರಯತ್ನಿಸಬೇಕು.  ಕರಾರು ಅಥವಾ ವೆಬ್ಸೈಟ್ ಗೆ ಸಂಬಂಧಿಸಿದಂತೆ ಕಾನೂನು ಕ್ರಿಯೆಯ ಅಗತ್ಯವಿದ್ದಲ್ಲಿ, ಅದು ಆರ್ಕನ್ಸಾಸ್ ನ ವೈಟ್ ಕಂಟ್ರಿಯ ಸ್ಟೇಟ್ ಕೋರ್ಟ್ ನಲ್ಲಿ ಅಥವಾ ಆರ್ಕನ್ಸಾಸ್ ನ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಫಾರ್ ದಿ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ಆರ್ಕನ್ಸಾಸ್ ನಲ್ಲಿರುತ್ತದೆ.  ಬಳಕೆದಾರನು ಫೋರಂ ಆಫ್ ನಾನ್ ಕೊನ್ವೆನಿಎನ್ಸ್ ನ (forum non conveniens) ಯಾವುದೇ  ರಕ್ಷಣೆಯನ್ನು ಬಿಟ್ಟುಕೊಡುತ್ತಾನೆ.

ಸಂಪೂರ್ಣ ಕರಾರು. ಈ ಕರಾರು ಟ್ರೂತ್ ಫಾರ್ ಟುಡೆ ಮತ್ತು ಬಳಕೆದಾರರ ನಡುವೆ ಇಲ್ಲಿ ನೀಡಿರುವ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ಕರಾರು ಆಗಿದ್ದು, ಈ ಮೊದಲು ಈ ಕರಾರಿನ ವಿಷಯವಸ್ತುವಿಗೆ ಸಂಬಂಧಿಸಿದಂತೆ ಮಾಡಿರುವ  ಎಲ್ಲಾ ಮೌಖಿಕ ಅಥವಾ ಲಿಖಿತ ತಿಳಿವಳಿಕೆಗಳು, ವಾಗ್ದಾನಗಳು ಮತ್ತು ಜವಾಬ್ದಾರಿಗಳನ್ನು, ಯಾವುದಾದರೂ ಇದ್ದಲ್ಲಿ, ಅವುಗಳನ್ನು ರದ್ದುಗೊಳಿಸುತ್ತದೆ. ಟ್ರೂತ್ ಫಾರ್ ಟುಡೆ ಇವರು ಲಿಖಿತರೂಪದಲ್ಲಿ ಅಧಿಕೃತಗೊಳಿಸದ ಹೊರತು ಮತ್ತು ಖಚಿತಪಡಿಸದ ಹೊರತು ಈ ಕರಾರಿನ ಯಾವುದೇ ಭಾಗವನ್ನು ಮಾರ್ಪಾಡು ಮಾಡುವುದು, ತಿದ್ದುಪಡಿ ಮಾಡುವುದು,  ಬಿಟ್ಟುಕೊಡುವುದು, ತೆಗೆದುಹಾಕುವುದು ಅಥವಾ  ರದ್ದುಮಾಡುವುದನ್ನು ನಿರ್ಬಂಧಿಸಲಾಗಿದೆ.

ಒಡೆತನ. ಟ್ರೂತ್ ಫಾರ್ ಟುಡೆ ಒದಗಿಸುತ್ತಿರುವ ವೆಬ್ಸೈಟ್ ಮತ್ತು ಸಂಬಂಧಿಸಿದ ಎಲ್ಲಾ ಪಠ್ಯ ಸಾಮಗ್ರಿಗಳು ಸಂಪೂರ್ಣವಾಗಿ ಟ್ರೂತ್ ಫಾರ್ ಟುಡೆಯ ಒಡೆತನಕ್ಕೆ ಒಳಪಟ್ಟಿದ್ದು ಸೂಕ್ತ ಪರವಾನಿಗೆ ಹೊಂದಿರುವ ಸ್ವತ್ತಾಗಿರುತ್ತದೆ. ವೆಬ್ಸೈಟ್‍ಗೆ ಪರವಾನಿಗೆ ಇದ್ದು, ಈ ಕರಾರಿನ ಷರತ್ತುಗಳಡಿ ನಿಮಗೆ ಮಾರಲಾಗುವುದಿಲ್ಲ.  ಟ್ರೂತ್ ಫಾರ್ ಟುಡೆ, ವೆಬ್ಸೈಟ್‍ನ ಯಾವುದೇ ಟೈಟಲ್, ಮಾಲೀಕತ್ವದ ಹಕ್ಕು ಅಥವಾ ಹಿತಾಸಕ್ತಿಯನ್ನು ಮಾರುವುದಿಲ್ಲ, ವಹಿಸಿಕೊಡುವುದಿಲ್ಲ, ವರ್ಗಾಯಿಸುವುದಿಲ್ಲ ಅಥವಾ ಹಸ್ತಾಂತರಿಸುವುದಿಲ್ಲ. ವೆಬ್ಸೈಟ್ ಬಳಸುವ ಮುಖಾಂತರ, ಈ ಕರಾರಿನ ಷರತ್ತುಗಳಿಗೆ ಅನುಗುಣವಾಗಿ, ವೆಬ್ಸೈಟ್ ಮತ್ತು ವೆಬ್ಸೈಟ್‍ನಲ್ಲಿ ಅಳವಡಿಸಿರುವ ಮೂರನೇ ಪಾರ್ಟಿಯ ಯಾವುದೇ ಸಾಫ್ಟ್ ವೇರ್ ಪ್ರೋಗ್ರಾಂಗಳು ಅಥವಾ ಅವರ ಮಾಲೀಕತನ ಪಡೆದಿರುವ ಇತರ ಸಾಮಗ್ರಿಗಳನ್ನು ಬಳಸಲು ನಿರ್ಬಂಧಕ್ಕೊಳಪಡದ, ವರ್ಗಾವಣೆ ಮಾಡಲಾಗದ ಪರವಾನಿಗೆಗೆ ಮಾತ್ರ ನೀವು ಒಪ್ಪುತ್ತೀರಿ.   ಟ್ರೂತ್ ಫಾರ್ ಟುಡೆ,  ವೆಬ್ಸೈಟ್ ಗೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಅನ್ವಯವಾಗುವ ಎಲ್ಲಾ ಹಕ್ಕುಗಳು, ಟೈಟಲ್ ಮತ್ತು ಹಿತಾಸಕ್ತಿಗಳನ್ನು (ಕಾಪಿರೈಟ್, ಪೇಟೆಂಟ್, ಟ್ರೇಡ್ ಮಾರ್ಕ್, ಸರ್ವೀಸ್ ಮಾರ್ಕ್ ಮತ್ತು ಎಲ್ಲಾ ಹಾಗೂ ಯಾವುದೇ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಳಗೊಂಡಂತೆ ಮತ್ತು ಇವುಗಳಿಗೆ ಸೀಮಿತವಾಗಿಲ್ಲದಂತೆ) ಕಾದಿರಿಸಿಕೊಳ್ಳುತ್ತದೆ. ಈ ಉತ್ಪನ್ನಕ್ಕೆ ಪಾವತಿಸಿದ ಯಾವುದೇ ಸಂಭಾವನೆಯು ಈ ವೆಬ್ಸೈಟ್ ಬಳಕೆಗೆ ಸಂಬಂಧಿಸಿದ ಶುಲ್ಕವನ್ನು ಒಳಗೊಂಡಿರುತ್ತದೆ.

 ಉಪಯೋಗ.

  1. ಈ ಕರಾರಿನಲ್ಲಿ ಹೇಳಿರುವುದನ್ನು ಹೊರತುಪಡಿಸಿ ಟ್ರೂತ್ ಫಾರ್ ಟುಡೆಯ ಮುಂಚಿತ ಲಿಖಿತ ಒಪ್ಪಿಗೆ ಇಲ್ಲದೆ ವೆಬ್ಸೈಟ್ ಅಥವಾ ಅದರಲ್ಲಿನ ಯಾವುದೇ ಭಾಗವನ್ನು ಕಾಪಿ ಮಾಡುವುದು, ಮರುಉತ್ಪಾದಿಸುವುದು, ನಕಲು ಮಾಡುವುದು, ಅನುವಾದಿಸುವುದು, ರಿವರ್ಸ್ ಇಂಜಿನಿಯರಿಂಗ್,  ಪರಿವರ್ತನೆ, ಡಿಕಂಪೈಲೇಷನ್, ಡಿಸ್‍ಅಸೆಂಬ್ಲಿ, ರಿವರ್ಸ್ ಅಸೆಂಬ್ಲಿ, ಮಾರ್ಪಾಡು ಮಾಡುವುದು ಅಥವಾ ಬದಲಿಸುವುದನ್ನು ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ. ಟ್ರೂತ್ ಫಾರ್ ಟುಡೆಯ ಮುಂಚಿತ ಲಿಖಿತ ಒಪ್ಪಿಗೆ ಇಲ್ಲದೆ  ವೆಬ್ಸೈಟ್ ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಕಂಪ್ಯೂಟರ್ ಪ್ರೋಗ್ರಾಂನೊಂದಿಗೆ ಒಟ್ಟುಸೇರಿಸುವುದು ಅಥವಾ ಸೇರಿಸುವುದು, ಮತ್ತು  ವೆಬ್ಸೈಟ್ ಅಥವಾ ಅದರ ಯಾವುದೇ ಭಾಗದಿಂದ ಜನ್ಯ ಕೆಲಸಗಳನ್ನು(derivative works) ಅಥವಾ ಪ್ರೋಗ್ರಾಂಗಳನ್ನು ರಚಿಸುವುದನ್ನು ಸಹ ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ.
  2. ವೆಬ್ಸೈಟ್ ನ ಯಾವುದೇ ಭಾಗವನ್ನು ಮರುಉತ್ಪಾದಿಸುವ, ನಕಲು ಮಾಡುವ, ಮಾರ್ಪಡಿಸುವ ಅಥವಾ ಉಪಯೋಗಕ್ಕೆ ಬಾರದಂತೆ ಮಾಡುವ ಅನುಮತಿಗಾಗಿ ಈ ಕರಾರಿನ ಕೊನೆಯಲ್ಲಿ ನೀಡಿರುವ ವಿಳಾಸಕ್ಕೆ ಟ್ರೂತ್ ಫಾರ್ ಟುಡೆಗೆ ನೀವು ಲಿಖಿತ ಕೋರಿಕೆ ಸಲ್ಲಿಸಬೇಕು. ನೀಡಲಾಗುವ ಯಾವುದೇ ಅನುಮತಿಯು ಸಂಪೂರ್ಣವಾಗಿ ಟ್ರೂತ್ ಫಾರ್ ಟುಡೆಯ ಏಕಮೇವ, ಸ್ವತಂತ್ರ ಮತ್ತು  ಸ್ವಂತ ತೀರ್ಮಾನಕ್ಕೊಳಪಟ್ಟಿರುತ್ತದೆ.
  3. ವೆಬ್ಸೈಟ್ ಅಥವಾ ಅದರಲ್ಲಿನ ಯಾವುದೇ ಭಾಗವು ಬಾಡಿಗೆಗೆ, ಲೀಸ್ ಗೆ, ಮಾರಾಟಕ್ಕೆ, ಹಸ್ತಾಂತರ ಮಾಡಲು, ವರ್ಗಾಯಿಸಲು, ಮರು-ಪರವಾನಿಗೆಗೆ, ಉಪ-ಪರವಾನಿಗೆಗೆ ಅಥವಾ ಯಾವುದೇ ಉದ್ದೇಶಕ್ಕಾಗಿ  ರವಾನೆಗೆ ಲಭ್ಯವಿರುವುದಿಲ್ಲ. ಈ ಕರಾರನ್ನು ಉಲ್ಲಂಘಿಸಿ ವೆಬ್ಸೈಟ್ ಅನ್ನು ಬಾಡಿಗೆಗೆ ನೀಡುವ, ಲೀಸ್ ಗೆ ನೀಡುವ, ಮಾರಾಟ ಮಾಡುವ, ಹಸ್ತಾಂತರಿಸುವ, ವರ್ಗಾಯಿಸುವ, ಮರು-ಪರವಾನಿಗೆಗೊಳಪಡಿಸುವ, ಉಪ-ಪರವಾನಿಗೆಗೊಳಪಡಿಸುವ, ರವಾನಿಸುವ, ಉಡುಗೊರೆಯಾಗಿ ನೀಡುವ ಅಥವಾ  ಇತರ   ರೀತಿಯಲ್ಲಿ ಹತೋಟಿಯಲ್ಲಿಡುವ ಪ್ರಯತ್ನಗಳು ನಿರರ್ಥಕ ಮತ್ತು ಅನೂರ್ಜಿತವಾಗಿರುತ್ತವೆ. ಈ ಕರಾರನ್ನು ಉಲ್ಲಂಘಿಸುವ ಯಾವುದೇ ಕ್ರಿಯೆ ಅಥವಾ ಕ್ರಿಯೆಯನ್ನು ತಡೆಗಟ್ಟುವಲ್ಲಿ ಆಗುವ ವೈಫಲ್ಯವು ಸಿವಿಲ್ ಮತ್ತು/ಅಥವಾ ಕ್ರಿಮಿನಲ್ ಆರೋಪವಾಗಿ ಪರಿಣಮಿಸಬಹುದು.
  4. ಟ್ರೂತ್ ಫಾರ್ ಟುಡೆಯನ್ನು ಹೊರತುಪಡಿಸಿ ಇತರರು ಅಭಿವೃದ್ಧಿಪಡಿಸಿದ ಮತ್ತು/ಅಥವಾ ಇತರರ ಒಡೆತನದ, ವೆಬ್ಸೈಟ್ ನೊಂದಿಗೆ (“ಮೂರನೇ-ಪಾರ್ಟಿಯ ಸಾಫ್ಟ್ ವೇರ್”) ಸೇರಿಸಲಾದ ಅಥವಾ ವೆಬ್ಸೈಟ್‍ನೊಳಗೆ ಅಳವಡಿಸಲಾದ ಪ್ರೋಗ್ರಾಂಗಳು ಅಥವಾ ಸಾಫ್ಟ್ ವೇರ್   ಈ ಕರಾರಿಗೆ ಒಳಪಟ್ಟಿದೆ ಮತ್ತು ಅದರ ಬಳಕೆಯು ಈ ಕರಾರಿನ  ನಿರ್ವಹಣೆಗೊಳಪಟ್ಟಿದೆ.  ಮೂರನೇ-ಪಾರ್ಟಿ ಸಾಫ್ಟ್ ವೇರ್ ಅನ್ನು ವೆಬ್ಸೈಟ್ ಗೆ ಸಂಬಂಧಿಸಿದ ಉದ್ದಿಷ್ಟ ಬಳಕೆಯನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸಲಾಗಿದೆ.

ಮೂರನೇ-ಪಾರ್ಟಿ ಸೈಟ್‍ಗಳು ಮತ್ತು ವಿಷಯವಸ್ತು. ವೆಬ್ಸೈಟ್, ಮೂರನೇ ಪಾರ್ಟಿಗಳಿಗೆ (“ಮೂರನೇ-ಪಾರ್ಟಿ ಕಂಟೆಂಟ್”) ಅಥವಾ ಮೂರನೇ ಪಾರ್ಟಿಗಳ ಮೂಲದ ಬೇರೆ ವೆಬ್ಸೈಟ್‍ಗಳಿಗೆ (:ಮೂರನೇ-ಪಾರ್ಟಿ ಸೈಟ್‍ಗಳು) ಹಾಗೂ ಲೇಖನಗಳು, ಫೋಟೋಗಳು, ಪಠ್ಯ, ಗ್ರಾಫಿಕ್ಸ್,  ಚಿತ್ರಗಳು, ವಿನ್ಯಾಸಗಳು, ಸಂಗೀತ, ಧ್ವನಿ, ವೀಡಿಯೊ, ಮಾಹಿತಿ, ಅಪ್ಲಿಕೇಶನ್‍ಗಳು, ಸಾಫ್ಟ್ ವೇರ್, ಮತ್ತು ಇತರ ವಿಷಯವಸ್ತು ಅಥವಾ ಐಟಂಗಳಿಗೆ ಲಿಂಕ್ ಹೊಂದಿರಬಹುದು.  ಟ್ರೂತ್ ಫಾರ್ ಟುಡೆ, ಇಂತಹ ಮೂರನೇ-ಪಾರ್ಟಿ ಸೈಟ್‍ಗಳು ಮತ್ತು ಮೂರನೆ ಪಾರ್ಟಿ ಕಂಟೆಂಟ್‍ಗಳನ್ನು ನಿಖರತೆ,  ಯುಕ್ತತೆ, ಅಥವಾ ಸಂಪೂರ್ಣತೆಗಾಗಿ ಪರೀಕ್ಷಿಸುವುದಿಲ್ಲ.   ವೆಬ್ಸೈಟ್ ಬಳಕೆಯ ಮೂಲಕ ಆಕ್ಸೆಸ್ ಮಾಡಲಾದ ಮೂರನೇ ಪಾರ್ಟಿಯ ಯಾವುದೇ ತಾಣಗಳು ಅಥವಾ ಅದರಲ್ಲಿ ಪೋಸ್ಟ್ ಮಾಡಲಾದ, ಲಭ್ಯವಿರುವ, ಅಥವಾ ವೆಬ್ಸೈಟ್‍ನಿಂದ ಇನ್ಸ್ಟಾಲ್ ಮಾಡಲಾದ ಮೂರನೇ ಪಾರ್ಟಿಯ ಯಾವುದೇ ವಿಷಯಗಳಿಗೆ ಟ್ರೂತ್ ಫಾರ್ ಟುಡೆ ಜವಾಬ್ದಾರರಾಗಿರುವುದಿಲ್ಲ; ಇದರಲ್ಲಿ ವಿಷಯವಸ್ತು, ನಿಖರತೆ,  ಅಪಮಾನಕರವಾಗಿರುವಿಕೆ, ಅಭಿಪ್ರಾಯಗಳು,  ವಿಶ್ವಸನೀಯತೆ, ಗೋಪ್ಯತೆಯ ನೀತಿಗಳು, ಅಥವಾ ಮೂರನೇ-ಪಾರ್ಟಿ ಸೈಟ್‍ಗಳ ಅಥವಾ ಅದರಲ್ಲಿರುವ ಕಾರ್ಯನೀತಿಗಳು ಅಥವಾ ಮೂರನೇ ಪಾರ್ಟಿ ಕಂಟೆಂಟ್ ಒಳಗೊಂಡಿರುತ್ತದೆ. ಯಾವುದೇ ಮೂರನೇ ಪಾರ್ಟಿ ಸೈಟ್ ಅಥವಾ ಮೂರನೇ ಪಾರ್ಟಿ ಕಂಟೆಂಟ್ ಅನ್ನು ಸೇರಿಸುವುದು ಅಥವಾ ಅವುಗಳಿಗೆ ಲಿಂಕ್ ಮಾಡುವುದು ಅಥವಾ ಅವುಗಳ ಬಳಕೆ ಮತ್ತು ಅಳವಡಿಕೆಗೆ ಅನುಮತಿ ನೀಡುವುದು ಇದು ಟ್ರೂತ್ ಫಾರ್ ಟುಡೆಯ ಅನುಮೋದನೆ ಅಥವಾ  ಸಮ್ಮತಿಯನ್ನು ಸೂಚಿಸುವುದಿಲ್ಲ. ಕೆಲವು ಮೂರನೇ ಪಾರ್ಟಿ ತಾಣಗಳಿಗೆ ಆಕ್ಸೆಸ್ ಹೊಂದುವುದನ್ನು ತಡೆಗಟ್ಟಲು ಕೆಲವು ಕಂಪ್ಯೂಟರ್ ಗಳು ಫಿಲ್ಟರಿಂಗ್ ಸಾಫ್ಟ್ ವೇರ್ ಅನ್ನು ಅಳವಡಿಸಿಕೊಂಡಿದ್ದರೂ, ವೆಬ್ಸೈಟ್ ಬಳಕೆಯ ಮುಖಾಂತರ ಆಕ್ಸೆಸ್ ಮಾಡಲಾದ ಮೂರನೇ ಪಾರ್ಟಿಯ ಯಾವುದೇ ತಾಣಗಳು ಅಥವಾ ಮೂರನೇ ಪಾರ್ಟಿಯ ಕಂಟೆಂಟ್ ಗಳಿಗೆ ಟ್ರೂತ್ ಫಾರ್ ಟುಡೆ ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ.

ಸೈಟ್ ಕಾರ್ಯನೀತಿಗಳು, ಮಾರ್ಪಾಡುಗಳು, ಮತ್ತು ವಿಚ್ಛೇದನೀಯತೆ (Severability) ವೆಬ್ಸೈಟ್‍ನಲ್ಲಿ ಪೋಸ್ಟ್ ಮಾಡಿರುವ ನಮ್ಮ ಗೋಪ್ಯತಾ ಕಾರ್ಯನೀತಿಯಂಥ ಇತರ ನೀತಿಗಳನ್ನು ದಯವಿಟ್ಟು ಪರಿಶೀಲಿಸಿ. ಟ್ರೂತ್ ಫಾರ್ ಟುಡೆ, ಯಾವುದೇ ಸಮಯದಲ್ಲಿ ವೆಬ್ಸೈಟ್, ಕಾರ್ಯನೀತಿಗಳು ಮತ್ತು ಬಳಕೆಗೆ ಸಂಬಂಧಿಸಿದ ಷರತ್ತುಗಳಿಗೆ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಕಾಯ್ದುಕೊಂಡಿರುತ್ತದೆ. ವೆಬ್ಸೈಟ್‍ನ ಷರತ್ತುಗಳು ಮತ್ತು ಕಾರ್ಯನೀತಿಗಳಲ್ಲಿನ ಯಾವುದಾದರೊಂದು ನಿಬಂಧನೆಯು ಅಮಾನ್ಯ, ಅನೂರ್ಜಿತ, ಅಥವಾ ಯಾವುದೇ ಕಾರಣಕ್ಕಾಗಿ ಜಾರಿಗೆ ತರಲು ಅಸಾಧ್ಯ ಎಂಬುದಾಗಿ ಪರಿಗಣಿಸಲ್ಪಟ್ಟಲ್ಲಿ, ಆ ನಿಬಂಧನೆಯನ್ನು ವಿಚ್ಛೇದನೀಯ (severable)  ಎಂಬುದಾಗಿ ಪರಿಗಣಿಸಲಾಗುತ್ತದೆ ಮತ್ತು ಉಳಿದ ನಿಬಂಧನೆಗಳ ಮಾನ್ಯತೆ ಮತ್ತು ವಿಧಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.

 ಸಂಪರ್ಕ ವೆಬ್ಸೈಟ್‍ನ ಯಾವುದೇ ಷರತ್ತುಗಳು ಅಥವಾ ಕಾರ್ಯನೀತಿಯ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಇಲ್ಲಿ ಸಂಪರ್ಕಿಸಿ :

Truth for Today World Mission School, Inc.
P.O. Box 2044
Searcy, Arkansas
72145-2044, U.S.A.