ಗೋಪ್ಯತೆಯ ಕಾರ್ಯನೀತಿ

ಇದು ಟ್ರೂತ್ ಫಾರ್ ಟುಡೆ ವರ್ಲ್ಡ್ ಮಿಷನ್ ಸ್ಕೂಲ್, ಇಂಕ್ ನ ವೆಬ್ಸೈಟ್ ಆಗಿರುತ್ತದೆ (“ಟ್ರೂತ್ ಫಾರ್ ಟುಡೆ “). ಈ ವೆಬ್ಸೈಟ್ (“the Website”) ಮೂಲಕ ನೀವು ನಮಗೆ ಒದಗಿಸುವ ಮಾಹಿತಿಯನ್ನು ಎಚ್ಚರಿಕೆಯಿಂದ ಕಾಪಾಡುವ ಮೂಲಕ ನಾವು ನಿಮ್ಮ ಗೋಪ್ಯತೆಯನ್ನು ಗೌರವಿಸುತ್ತೇವೆ. ನೀವು ನಮ್ಮಲ್ಲಿ ವಿಶ್ವಾಸವಿಡಬೇಕೆಂದು ನಾವು ಬಯಸುತ್ತೇವೆ.  ಈ ಮಾಹಿತಿಯನ್ನು ನೀವು ಎಚ್ಚರಿಕೆಯಿಂದ ಮತ್ತು ನಾಜೂಕಿನಿಂದ ಉಪಯೋಗಿಸಬೇಕಾಗುತ್ತದೆ. ವೆಬ್ಸೈಟ್ ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಆ ಮಾಹಿತಿಯನ್ನು ನಾವು ಏನು ಮಾಡುತ್ತೇವೆ ಎಂಬುದನ್ನು ಇಲ್ಲಿ ಬಹಿರಂಗಪಡಿಸಲಾಗಿದೆ

ವೆಬ್ಸೈಟ್ ಗೋಪ್ಯತೆ

ನೀವು ವೆಬ್ಸೈಟ್‍ಗೆ ಕನೆಕ್ಟ್ ಆದಾಗ, ನಿಮಗೆ ಇಂಟರ್ನೆಟ್ ಆಕ್ಸೆಸ್ ಒದಗಿಸುತ್ತಿರುವ ಕಂಪ್ಯೂಟರಿನ ಇಂಟರ್ನೆಟ್ ವಿಳಾಸವನ್ನು (IP) ಗುರುತಿಸಲು ನಮಗೆ ಸಾಧ್ಯವಾಗುತ್ತದೆ. IP ವಿಳಾಸವನ್ನು ನಾವು ಉಪಯೋಗಿಸುವುದು ಏಕೆಂದರೆ ನಮ್ಮ ಸರ್ವರ್ ನಲ್ಲಿನ ಸಮಸ್ಯೆಯನ್ನು ಪತ್ತೆಮಾಡಲು ಅಥವಾ ನಮ್ಮ ವೆಬ್ಸೈಟ್ ನ ನಿರ್ವಹಣೆಗೆ.  ಇದನ್ನು ಜನವಿವರಗಳಿಗೆ ಸಂಬಂಧಿಸಿದ ವ್ಯಾಪಕ ಮಾಹಿತಿಯನ್ನು ಕಲೆಹಾಕಲು ಸಹ ಉಪಯೋಗಿಸಬಹುದು. ನಿಮ್ಮ IP ವಿಳಾಸವನ್ನು ನಿಮ್ಮ ಹೆಸರಿನೊಂದಿಗೆ ಸಂಯೋಜಿಸಲಾಗುವುದಿಲ್ಲ ಮತ್ತು ಅದನ್ನು ಇನ್ನೊಂದು ಕಂಪನಿ ಅಥವಾ ಸಂಸ್ಥೆಗೆ ನೀಡುವುದಿಲ್ಲ.

ಇತರ ವೆಬ್ಸೈಟ್‍ಗಳು

ಟ್ರೂತ್ ಫಾರ್ ಟುಡೆಯ ಮೂಲಕ ಕಾರ್ಯಾಚರಣೆಗೊಳಪಡದ ಅಥವಾ ನಿಯಂತ್ರಣಕ್ಕೊಳಪಡದ ಬೇರೆ ಇಂಟರ್ನೆಟ್ ತಾಣಗಳಿಗೆ ವೆಬ್ಸೈಟ್ ಲಿಂಕ್‍ಗಳನ್ನು ಹೊಂದಿರಬಹುದು. ಟ್ರೂತ್ ಫಾರ್ ಟುಡೆಗೆ ಸಂಬಂಧಿಸಿರದ ಗೋಪ್ಯತಾ ವಿಧಾನಗಳಿಗೆ ಅಥವಾ ತಾಣಗಳ ಕಂಟೆಂಟ್‍ಗಳಿಗೆ ನಾವು ಜವಾಬ್ದಾರರಲ್ಲ ಮತ್ತು ಜವಾಬ್ದಾರರಾಗಿರಲು ಸಾಧ್ಯವಿಲ್ಲ. ನೀವು ಭೇಟಿ ನೀಡುವ ಪ್ರತಿಯೊಂದು ವೆಬ್ಸೈಟ್‍ನ ಗೋಪ್ಯತಾ ಕಾರ್ಯನೀತಿಯನ್ನು ನೀವು ಓದಬೇಕೆಂದು ನಾವು ಪ್ರೋತ್ಸಾಹಿಸುತ್ತೇವೆ.

ಮಾಹಿತಿಯ ಬಳಕೆ ಮತ್ತು ಬಹಿರಂಗಪಡಿಸುವಿಕೆ ನೋಂದಣಿ ಫಾರ್ಮ್, ಆರ್ಡರ್ ಫಾರ್ಮ್, ಸಮೀಕ್ಷೆ ಫಾರ್ಮ್ ಅಥವಾ ನಮಗೆ ಕಳುಹಿಸುವ ಇಮೇಲ್‍ನಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಗುರುತಿಸುವ ಮಾಹಿತಿಗಳನ್ನು ನೀವಾಗಿಯೇ ನೀಡದ ಹೊರತು ನಾವು ಅವುಗಳನ್ನು ಒದಗಿಸುವಂತೆ ನಿಮ್ಮನ್ನು ಕೇಳುವುದಿಲ್ಲ. ನೀವು  ನಿಮ್ಮ ಸಂಪರ್ಕ ಮಾಹಿತಿ (ನಿಮ್ಮ ಇಮೇಲ್ ವಿಳಾಸ ಅಥವಾ ಅಂಚೆ ವಿಳಾಸ), ಹಣಕಾಸಿನ ಮಾಹಿತಿ (ನಿಮ್ಮ  ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ), ಮತ್ತು ಜನವಿವರ ಮಾಹಿತಿಯನ್ನು (ನಿಮ್ಮ ಪಿನ್‍ಕೋಡ್ ಅಥವಾ ವಯಸ್ಸು) ನೀಡುವಂತೆ ವೆಬ್ಸೈಟ್ ನಿಮ್ಮನ್ನು ಕೇಳಬಹುದು ಅಥವಾ ನೀವು ಅವುಗಳನ್ನು ನೀಡಬೇಕಾಗಬಹುದು. ನಾವು ಈ ಮಾಹಿತಿಯನ್ನು  ನೀವು ಕೋರುವ ಮಾಹಿತಿ, ಉತ್ಪನ್ನಗಳು ಅಥವಾ ಸೇವೆಗಳಿಗಾಗಿ ಉಪಯೋಗಿಸುತ್ತೇವೆ. ಉದಾಹರಣೆಗೆ, ಹಣಕಾಸಿನ ಮಾಹಿತಿಯನ್ನು ನೀವು ಆರ್ಡರ್ ಮಾಡುವ ಉತ್ಪನ್ನಗಳು ಮತ್ತು ಸೇವೆಗಳಿಗೆ ನಿಮಗೆ ಬಿಲ್ ಕಳುಹಿಸಲು ಉಪಯೋಗಿಸಲಾಗುತ್ತದೆ. ಸಂಗ್ರಹಿಸುವ ಯಾವುದೇ ಮಾಹಿತಿಯು ಮುಖ್ಯವಾಗಿ ಟ್ರೂತ್ ಫಾರ್ ಟುಡೆಯ ಆಂತರಿಕ ಉಪಯೋಗಕ್ಕಾಗಿ ಇದ್ದು ಹೊರಗಿನ ಯಾವುದೇ ಗುಂಪು ಅಥವಾ ಸಂಸ್ಥೆಗಳಿಗೆ ಲಭ್ಯವಾಗುವುದಿಲ್ಲ, ಆದರೆ ನೀವು ವೆಬ್ಸೈಟ್ ಮೂಲಕ ಆರ್ಡರ್ ಮಾಡಿರುವ ಉತ್ಪನ್ನಗಳನ್ನು ಮೇಲ್ ಮಾಡಲು ನಿಮ್ಮ ಹೆಸರು ಮತ್ತು ಅಂಚೆ ವಿಳಾಸವನ್ನು ಮೂರನೇ-ಪಾರ್ಟಿಗೆ ನೀಡಬೇಕಾಗುತ್ತದೆ.

ನಿಮ್ಮನ್ನು ವೈಯಕ್ತಿಕವಾಗಿ ಗುರುತು ಹಿಡಿಯುವ ಮಾಹಿತಿಗಳು ಮತ್ತು ಜನವಿವರ ಮಾಹಿತಿಗಳನ್ನು (ಅಂಚೆವಿಳಾಸ, ಇಮೇಲ್ ವಿಳಾಸ, ಫೋನ್ ಸಂಖ್ಯೆ ಇತ್ಯಾದಿಯಂಥ) ಒದಗಿಸಲು ನಿಮಗೆ ಆಯ್ಕೆ ಇರುತ್ತದೆ.   ನೀವು ಈ ಮಾಹಿತಿಗಳನ್ನು ಒದಗಿಸಬೇಕೆಂದು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ  ಏಕೆಂದರೆ ಇದರಿಂದ ನಾವು ನಮ್ಮ ಬಳಕೆದಾರರು ಯಾರು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ನಮಗೆ ಸಾಧ್ಯವಾಗುತ್ತದೆ.

ನೀವು ಈ ತಾಣಕ್ಕೆ ವೈಯಕ್ತಿಕವಾಗಿ ಗುರುತು ಹಿಡಿಯಬಲ್ಲ ಮಾಹಿತಿಯನ್ನು ಒದಗಿಸಿದರೆ, ನಾವು ಇಂಥ ಮಾಹಿತಿಯನ್ನು ಸಕ್ರಿಯವಾಗಿ ಸಂಗ್ರಹಿಸಿದ ಬೇರೆ ಮಾಹಿತಿಯೊಂದಿಗೆ ಸಂಯೋಜಿಸಬಹುದು, ಆದರೆ ಸಂಗ್ರಹಣೆಯ ಸಮಯದಲ್ಲಿ ನಾವು ಹೀಗೆ ಮಾಡದಿರುವಂತೆ  ಹೇಳಿದಲ್ಲಿ ಸಂಯೋಜನೆ ಸಾಧ್ಯವಾಗುವುದಿಲ್ಲ.

ನಾವು ವೈಯಕ್ತಿಕವಾಗಿ ನಿಮ್ಮ ಗುರುತು ಹಿಡಿಯಬಹುದಾದ ಮಾಹಿತಿಯನ್ನು ಸಹ ಬಹಿರಂಗಪಡಿಸಬಹುದು, ಆದರೆ ಈ ಕೆಳಗಿನವರಿಗೆ ಮಾತ್ರ:

  1. ನಮ್ಮ ವ್ಯವಹಾರಕ್ಕೆ ಬೆಂಬಲ ನೀಡುವ ಕಂಟ್ರಾಕ್ಟರುಗಳಿಗೆ (ನಮ್ಮ ಸಂಶೋಧನಾ ಮಾರಾಟಗಾರರು ಮತ್ತು ತಾಂತ್ರಿಕ ಬೆಂಬಲ ಸಿಬ್ಬಂದಿ ಇಂಥವರಿಗೆ), ಇಂಥ ಸಂದರ್ಭದಲ್ಲಿ ಈ ಮೂರನೇ ಪಾರ್ಟಿಗಳು ಈ ಗೋಪ್ಯತಾ ಕಾರ್ಯನೀತಿಗನುಗುಣವಾಗಿ ಇದನ್ನು ಪರಿಗಣಿಸಬೇಕಾಗುತ್ತದೆ ಮತ್ತು ಅದೇ ಉದ್ದೇಶಗಳಿಗಾಗಿ ಅದನ್ನು ಬಳಸಬೇಕಾಗುತ್ತದೆ;
  2.  ಕಾನೂನು ಅನುಸರಣೆಯ ಕೋರಿಕೆಗಳಿಗೆ ಪ್ರತಿಕ್ರಿಯಿಸಲು ಅಥವಾ ಅನ್ವಯವಾಗುವ ಕಾನೂನುಗಳು, ಕೋರ್ಟ್ ಆದೇಶಗಳು, ಅಥವಾ ಸರಕಾರಿ ನಿಬಂಧನೆಗಳ ಕೋರಿಕೆಯ ಮೇರೆಗೆ.

ಈ ಗೋಪ್ಯತೆಯ ಕಾರ್ಯನೀತಿಯಲ್ಲಿ ಪರಿಗಣಿಸಲಾಗಿರುವ ಮಾಹಿತಿ ಸಂಗ್ರಹಣೆ, ಬಳಕೆ ಮತ್ತು ಬಹಿರಂಗಪಡಿಸುವಿಕೆಯು ನೀವು ವಾಸವಾಗಿರುವ ದೇಶದಿಂದ ಹೊರಗಿನ ದೇಶಗಳಲ್ಲಿನ ನ್ಯಾಯವ್ಯಾಪ್ತಿಗೆ ವರ್ಗಾಯಿಸುವುದನ್ನು ಒಳಗೊಂಡಿರಬಹುದು ಮತ್ತು ಈ ದೇಶಗಳಲ್ಲಿ ವ್ಯಕ್ತಿಯನ್ನು ಗುರುತಿಸಬಲ್ಲ ಮಾಹಿತಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳು ನಿಮ್ಮ ದೇಶದ ಕಾನೂನು ಮತ್ತು ನಿಯಮಗಳಿಗೆ ಹೋಲಿಸಿದಲ್ಲಿ ಬೇರೆಯಾಗಿರಬಹುದು. ಈ ಮಾಹಿತಿಯನ್ನು ನೀಡುವ ಮೂಲಕ, ಈ ಗೋಪ್ಯತೆಯ ಕಾರ್ಯನೀತಿಗನುಗುಣವಾಗಿ ಇಂಥ ವರ್ಗಾವಣೆಗಳಿಗೆ ಮತ್ತು ಬಹಿರಂಗಪಡಿಸುವಿಕೆಗಳಿಗೆ ನೀವು ಸಮ್ಮತಿ ನೀಡುತ್ತೀರಿ.

ಆನ್ಲೈನ್ ಟ್ರ್ಯಾಕಿಂಗ್ ನಮ್ಮ ವೆಬ್ಸೈಟ್ ಪ್ರಸ್ತುತ, ವೆಬ್‍ ಬ್ರೌಸರ್, “ಟ್ರ್ಯಾಕ್ ಮಾಡಬೇಡಿ” ಸಂಕೇತಗಳು ಅಥವಾ ಇಂಥಹುದೇ ಬೇರೆ  ಪ್ರಕ್ರಿಯೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ವೆಬ್ಸೈಟ್‍ನಲ್ಲಿ ನಿಮ್ಮ ಅನುಭವವನ್ನು ಉತ್ತಮಪಡಿಸಲು “ಮಾಹಿತಿಯ ಬಳಕೆ ಮತ್ತು ಬಹಿರಂಗಪಡಿಸುವಿಕೆ” ಮತ್ತು “ಕುಕ್ಕೀಗಳು” ವಿಭಾಗದಲ್ಲಿ ವಿವರಿಸಿರುವಂತೆ, ಮೂರನೇ-ಪಾರ್ಟಿಯ ವೆಬ್‍ಸೈಟ್‍ಗಳು ಅಥವಾ ಆನ್ಲೈನ್ ಸೇವೆಗಳಲ್ಲಿ  ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದಾದ ಸಾಫ್ಟ್ವೇರ್ ಗಳನ್ನು ನಾವು ಉಪಯೋಗಿಸಬಹುದು.

ಗೂಗಲ್ ಆಡ್‍ವರ್ಡ್ಸ್ ರಿಮಾರ್ಕೆಟಿಂಗ್-ನಮ್ಮ ವೆಬ್ಸೈಟ್‍ಗೆ ಭೇಟಿ ನೀಡಿದ ಬಳಕೆದಾರರಿಗೆ ಮೂರನೆ ಪಾರ್ಟಿಯ ವೆಬ್ಸೈಟ್‍ಗಳಲ್ಲಿ (ಗೂಗಲ್ ಒಳಗೊಂಡಂತೆ) ಜಾಹೀರಾತು ನೀಡಲು Throughthescriptures.com ಗೂಗಲ್ ಆಡ್‍ವರ್ಡ್ಸ್ ರಿಮಾರ್ಕೆಟಿಂಗ್ ಸೇವೆಯನ್ನು ಬಳಸುತ್ತದೆ. ಇದು ಗೂಗಲ್ ಸರ್ಚ್ ರಿಸಲ್ಟ್ಸ್ ಪುಟದಲ್ಲಿ ಪಠ್ಯ ಜಾಹೀರಾತಿನ ರೂಪದಲ್ಲಿರಬಹುದು, ಅಥವಾ ಗೂಗಲ್ಸ್ ಡಿಸ್ಪ್ಲೇ ನೆಟ್ವರ್ಕ್ ಒಳಗೊಂಡಿರುವ ವೆಬ್ಸೈಟ್‍ನಲ್ಲಿ ಬ್ಯಾನರ್ ಜಾಹೀರಾತಿನ ರೂಪದಲ್ಲಿರಬಹುದು. ಈ ಜಾಹೀರಾತುಗಳನ್ನು ಜಾರಿಗೊಳಿಸಲು,  throughthescriptures.com ಗೆ  ಯಾರಾದರೊಬ್ಬರ ಈ ಹಿಂದಿನ ಭೇಟಿಯ ಆಧಾರದ ಮೇಲೆ ಗೂಗಲ್ ಕುಕ್ಕೀಗಳನ್ನು  ಉಪಯೋಗಿಸುತ್ತದೆ. ನಮ್ಮ ಗೂಗಲ್ ಆಡ್‍ವರ್ಡ್ಸ್ ರಿಮಾರ್ಕೆಟಿಂಗ್ ಟ್ರ್ಯಾಕಿಂಗ್ ಆಯ್ಕೆಯನ್ನು ತ್ಯಜಿಸಲು, ಗೂಗಲ್‍ನ Ads Settings ಗೆ ಭೇಟಿ ನೀಡಿ.

ಆಕ್ಸೆಸ್, ತಿದ್ದುಪಡಿ, ಮತ್ತು ಅಪ್‍ಡೇಟ್ ನಿಮ್ಮ ವೈಯಕ್ತಿಕ ಗುರುತು ತಿಳಿಸುವ ಮಾಹಿತಿಯನ್ನು ನಿಖರವಾಗಿ,  ಅಪ್ ಟು ಡೇಟ್ ಆಗಿ, ಮತ್ತು ಪರಿಪೂರ್ಣವಾಗಿ ಇರಿಸಲು,  ವೆಬ್ಸೈಟ್‍ನಲ್ಲಿನ ಸೂಕ್ತ ಫಾರ್ಮ್‍ಗಳನ್ನು ಎಲ್ಲಾ ಹೊಸ ಸಂಪರ್ಕ ಮಾಹಿತಿ ಮತ್ತು ವ್ಯಕ್ತಿಗತವಾಗಿ ನಿಮ್ಮನ್ನು ಗುರುತಿಸಬಹುದಾದ ಮಾಹಿತಿಯೊಂದಿಗೆ ತುಂಬಿಸುವ ಮೂಲಕ ಟ್ರೂತ್ ಫಾರ್ ಟುಡೆಯೊಂದಿಗಿನ ಫೈಲ್‍ನಲ್ಲಿ ದಯವಿಟ್ಟು ನಿಮ್ಮ ಮಾಹಿತಿಯನ್ನು ಅಪ್‍ಡೇಟ್ ಮಾಡಿ.

ಡೇಟಾ ಭದ್ರತೆ ನಮಗೆ ಸಲ್ಲಿಸಲಾಗುವ ವೈಯಕ್ತಿಕ ಮಾಹಿತಿಯ ಸಂರಕ್ಷಣೆಗೆ, ರವಾನೆಯ ಸಮಯದಲ್ಲಿ ಹಾಗೂ ಒಮ್ಮೆ ನಮಗೆ ತಲುಪಿದ ಬಳಿಕ, ಅವುಗಳು ಕಳೆದುಹೋಗದಂತೆ, ಅಪಬಳಕೆಯಾಗದಂತೆ, ಅನಧಿಕೃತ ಬಳಕೆಯಾಗದಂತೆ, ಬಹಿರಂಗವಾಗದಂತೆ, ಮಾರ್ಪಾಡು ಹೊಂದದಂತೆ ಅಥವಾ ನಾಶವಾಗದಂತೆ ನಾವು ಸರ್ವೇಸಾಧಾರಣವಾಗಿ ಒಪ್ಪುವ ಉದ್ಯಮ ಪ್ರಮಾಣಕಗಳನ್ನು ಅನುಸರಿಸುತ್ತೇವೆ. ಇಂಟರ್ನೆಟ್ ಮೂಲಕ ನಡೆಸುವ ರವಾನೆ ಯಾವಾಗಲೂ ಸಂಪೂರ್ಣವಾಗಿ ಸುರಕ್ಷಿತ ಅಥವಾ ದೋಷ-ರಹಿತವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ಆದುದರಿಂದ, ನಿಮ್ಮ ಮಾಹಿತಿಯನ್ನು ರಕ್ಷಿಸಲು ವಾಣಿಜ್ಯಿಕವಾಗಿ ಸ್ವೀಕಾರಾರ್ಹ ಕ್ರಮಗಳನ್ನು ಬಳಸಲು ನಾವು ಪ್ರಯಾಸಪಡುತ್ತಿದ್ದರೂ, ನಾವು ಅದರ ಸಂಪೂರ್ಣ ಭದ್ರತೆಯನ್ನು ಖಾತರಿಪಡಿಸುವುದಿಲ್ಲ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು (ಹೆಸರು, ಇಮೇಲ್ ವಿಳಾಸ, ಇತ್ಯಾದಿ) ಅಪ್‍ಡೇಟ್ ಮಾಡಲು ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‍ವರ್ಡ್‍ನ ಆವಶ್ಯಕತೆ ಇದೆ. ನಿಮ್ಮ ಪಾಸ್‍ವರ್ಡ್ ಅನ್ನು ಗೋಪ್ಯವಾಗಿ ಭದ್ರವಾಗಿ ಇಡಿ; ಅದನ್ನು ಯಾರೊಂದಿಗೂ ಹಂಚಿಕೊಳ್ಳಿ. ವೆಬ್ಸೈಟ್‍ನಲ್ಲಿನ ಭದ್ರತೆಯ ಬಗ್ಗೆ ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಇಮೇಲ್‍ಗಳು ಟ್ರೂತ್ ಫಾರ್ ಟುಡೆಯಿಂದ ನೀವು ಪಡೆಯುವ ಇಮೇಲ್‍ಗಳು ಕೇವಲ ತಾಣದಲ್ಲಿ ನಿಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದವು ಗಳು ಆಗಿರುತ್ತವೆ, ಉದಾಹರಣೆಗೆ, ಕೋರ್ಸ್ ಖರೀದಿ ಅಥವಾ ಕೋರ್ಸ್ ಮುಕ್ತಾಯಗೊಳಿಸುವುದು.

ಕುಕ್ಕೀಗಳು  ಕುಕ್ಕಿ ಒಂದು ಚಿಕ್ಕ ಟೆಕ್ಸ್ಟ್ ಫೈಲ್ ಆಗಿದ್ದು ದಾಖಲೆ ಇರಿಸುವ ಉದ್ದೇಶಗಳಿಗಾಗಿ ಅದು ಬಳಕೆದಾರರ ಕಂಪ್ಯೂಟರ್ ನಲ್ಲಿ ಸಂಗ್ರಹವಾಗಿರುತ್ತದೆ.  ನಾವು ವೆಬ್ಸೈಟ್‍ನಲ್ಲಿ ಕುಕ್ಕೀಗಳನ್ನು ಉಪಯೋಗಿಸುತ್ತೇವೆ. ಕುಕ್ಕೀಗಳಲ್ಲಿ ನಾವು ಸಂಗ್ರಹಿಸುವ ಮಾಹಿತಿಯನ್ನು ವೆಬ್ಸೈಟ್‍ನಲ್ಲಿರುವಾಗ  ನೀವು  ಸಲ್ಲಿಸಿದ ವೈಯಕ್ತಿಕ ಗುರುತಿನ ಮಾಹಿತಿಯೊಂದಿಗೆ ಲಿಂಕ್ ಮಾಡುವುದಿಲ್ಲ.

ನಾವು ಶಾಶ್ವತ ಕುಕ್ಕೀಗಳನ್ನು ಉಪಯೋಗಿಸುತ್ತೇವೆ. ಶಾಶ್ವತ ಕುಕ್ಕೀ ವಿಸ್ತೃತ ಅವಧಿಯವರೆಗೆ ನಿಮ್ಮ ಹಾರ್ಡ್ ಡ್ರೈವ್‍ನಲ್ಲಿ ಉಳಿಯುತ್ತದೆ. ನಿಮ್ಮ ಇಂಟರ್ನೆಟ್ ಬ್ರೌಸರ್ ನ “ಸಹಾಯ” ಫೈಲ್‍ನಲ್ಲಿ ಒದಗಿಸಲಾಗಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಶಾಶ್ವತ ಕುಕ್ಕೀಗಳನ್ನು ತೆಗೆಯಬಹುದು.

ನೀವು ಕುಕ್ಕೀಗಳನ್ನು ತಿರಸ್ಕರಿಸಿದರೂ ಸಹ, ವೆಬ್ಸೈಟ್‍ ಅನ್ನು ಉಪಯೋಗಿಸಬಹುದು, ಆದರೆ ವೆಬ್ಸೈಟ್‍ನ ಕೆಲವೊಂದು ಪ್ರದೇಶಗಳನ್ನು ಉಪಯೋಗಿಸುವ ನಿಮ್ಮ ಸಾಮರ್ಥ್ಯಕ್ಕೆ ಮಿತಿಯಾಗಬಹುದು. ಉದಾಹರಣೆಗೆ, ಕುಕ್ಕೀಗಳನ್ನು ಸಕ್ರಿಯಗೊಳಿಸದ ಹೊರತು ಬಳಕೆದಾರನು ಕೋರ್ಸ್ ಪಠ್ಯಕ್ರಮಕ್ಕೆ ಸೇರ್ಪಡೆಹೊಂದುವಂತಿಲ್ಲ ಅಥವಾ ಲಾಗಿನ್ ಮಾಡುವಂತಿಲ್ಲ.

ವಿದ್ಯುನ್ಮಾನವಲ್ಲದ ಸಂವಹನಗಳು ನಮ್ಮ ವತಿಯಿಂದ ಅಂಚೆ ರವಾನಿಸಲು ನಾವು ಬೇರೆ ಕಂಪನಿಗಳನ್ನು ನೇಮಿಸಬಹುದು. ಅವರಿಗೆ ತಮ್ಮ ಕೆಲಸಗಳನ್ನು ನೆರವೇರಿಸಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೋಡಬೇಕಾಗಬಹುದು, ಆದರೆ ಅವನ್ನು ಬೇರೆ ಉದ್ದೇಶಗಳಿಗೆ ಬಳಸುವುದಿಲ್ಲ.

ಗೋಪ್ಯತೆಯ ಕಾರ್ಯನೀತಿಯಲ್ಲಿ ಬದಲಾವಣೆಗಳು ವೆಬ್ಸೈಟ್ ನಲ್ಲಿ ಸ್ಟೇಟ್ ಮೆಂಟ್‍ನ ತಿದ್ದುಪಡಿ ಆವೃತ್ತಿಯನ್ನು ಪೋಸ್ಟ್ ಮಾಡುವ ಮೂಲಕ ಈ ಗೋಪ್ಯತೆಯ ಕಾರ್ಯನೀತಿಯನ್ನು ಯಾವುದೇ ಸಮಯದಲ್ಲಿ ಮಾರ್ಪಾಡು ಮಾಡುವ ಮತ್ತು ಅಪ್‍ಡೇಟ್ ಮಾಡುವ ಹಕ್ಕನ್ನು ನಾವು ಹೊಂದಿರುತ್ತೇವೆ.  ಈ ಕಾರ್ಯನೀತಿಯನ್ನು ನಿಯಮಿತವಾಗಿ ಪರಿಶೀಲಿಸಿ. ನಿಮ್ಮನ್ನು ವ್ಯಕ್ತಿಗತವಾಗಿ ಗುರುತಿಸುವ ಮಾಹಿತಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ ಹೇಳಿದ್ದಕ್ಕಿಂತ ಬೇರೆ ರೀತಿಯಲ್ಲಿ ಈ ಮಾಹಿತಿಯನ್ನು ಉಪಯೋಗಿಸಲು ನಾವು ನಿರ್ಧರಿಸಿದಲ್ಲಿ, ನಾವು ಒಂದೋ ವೆಬ್ಸೈಟ್‍ನ ಹೋಂ ಪೇಜ್‍ನಲ್ಲಿ ಅಥವಾ ಇಮೇಲ್ ಮೂಲಕ ನಿಮಗೆ ಸೂಚನೆ ನೀಡುತ್ತೇವೆ.

ನಮ್ಮನ್ನು ಸಂಪರ್ಕಿಸುವುದು ಹೇಗೆ ಟ್ರೂತ್ ಫಾರ್ ಟುಡೆ ನಿಮ್ಮ ಗೋಪ್ಯತೆಯನ್ನು ಸಂರಕ್ಷಿಸುವ ಬದ್ಧತೆಗೆ ಒಳಪಟ್ಟಿದೆ. ಏಕೆಂದರೆ ನಿಮ್ಮ ಗೋಪ್ಯತೆಯನ್ನು ಕಾಪಾಡುವುದು ನಮಗೆ ಮುಖ್ಯ, ನಮ್ಮ ಗೋಪ್ಯತೆಯ ಕಾರ್ಯನೀತಿಗೆ ಸಂಬಂಧಿಸಿದಂತೆ ಯಾವಾಗಲೂ ನಿಮ್ಮ  ಕಳವಳಗಳನ್ನು ನಮಗೆ ಸಲ್ಲಿಸಬಹುದು.  ಟ್ರೂತ್ ಫಾರ್ ಟುಡೆ ಎಲ್ಲಾ ಸಕಾರಣ ಕಳವಳಗಳು ಮತ್ತು ವಿಚಾರಣೆಗಳಿಗೆ ಶೀಘ್ರವಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತದೆ.

Truth for Today World Mission School, Inc.
P.O. Box 2044
Searcy, Arkansas
72145-2044, U.S.A.