ಮತ್ತಾಯ 1—13

ಮತ್ತಾಯನ ಸುವಾರ್ತೆಯು ಹಳೆಯ ಒಡಂಬಡಿಕೆಯ ವಾಗ್ದಾನಗಳು ಮತ್ತು ಪ್ರವಾದನೆಗಳನ್ನು ನೆರವೇರಿಸುವದಕ್ಕೆ ಬಂದಂಥ ಅರಸನಾದ ಯೇಸು ಕ್ರಿಸ್ತನ ಬಗ್ಗೆ ಪರಿಚಯ ನೀಡುವದರೊಂದಿಗೆ ಹೊಸ ಒಡಂಬಡಿಕೆಯನ್ನು ಆರಂಭಗೊಳಿಸುತ್ತದೆ. ಮತ್ತಾಯದ ಕುರಿತ ತನ್ನ ಅಧ್ಯಯನದ ಮೊದಲ ಭಾಗದಲ್ಲಿ, ಸೆಲ್ಲರ್ಸ್ ಎಸ್. ಕ್ರೈನ, ಜೂ. ಅರಸನ ಜನನ ಸುತ್ತಲಿನ ಘಟನೆಗಳು ಮತ್ತು ಬರಲಿರುವ ರಾಜ್ಯದ ಕುರಿತ ಆತನ ಉಪದೇಶಗಳ ಬಗ್ಗೆ ಪರಾಮರ್ಶಿಸುತ್ತಾನೆ. ಯೇಸುವಿನ ಕಡೆಗೆ ತೋರಲ್ಪಟ್ಟ ಜನರ ಪ್ರತಿಕ್ರಿಯೆಗಳು ಹೇಗೆ ಒಂದು ಬಿರುಗಾಳಿಯಾಗಿ ತಯಾರಾಗಲಾರಂಭಿಸಿದವು ಎಂಬುದನ್ನು ಆತನು ತೋರಿಸಿ ಕೊಡುತ್ತಾನೆ. ಅದರ ಫಲಿತಗಳ ಬಗ್ಗೆ ಮುಂದಿನ ಕೋರ್ಸ್.ನಲ್ಲಿ, ಮತ್ತಾಯ 14-28 ಅಧ್ಯಾಯಗಳಲ್ಲಿ ವಿವರಿಸಲಾಗುತ್ತದೆ.


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

ಈ ಕೋರ್ಸ್ ಇನ್ನೂ ಲಭ್ಯವಿಲ್ಲ. ಇದು ಭವಿಷ್ಯದಲ್ಲಿ ಲಭ್ಯವಿರುತ್ತದೆ.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.

ಅಧ್ಯಯನ ನೆರವು

ಕೋರ್ಸಿನಲ್ಲಿ ನಿಮ್ಮ ಕಲಿಕೆಗೆ ಪೂರಕವಾದ ಹೆಚ್ಚುವರಿ ಅಧ್ಯಯನ ಸಾಮಗ್ರಿಗಳು ಈ ಕೋರ್ಸಿನಲ್ಲಿ ಲಭ್ಯವಿವೆ.