ಅಪೊಸ್ತಲರ ಕೃತ್ಯಗಳು 1—14

ಅಪೊಸ್ತಲರ ಕೃತ್ಯ ಪುಸ್ತಕವು ಆದಿ ಕ್ರೈಸ್ತತ್ವದ ಮೊದಲ ಮೂವತ್ತು ವರ್ಷಗಳ ವಿವರಗಳನ್ನು ನೀಡುತ್ತದೆ, ಅದರ ಪ್ರೇರಿತ ಮಾರ್ಗದರ್ಶನದೊಂದಿಗೆ, ಇಂದು ದೇವರ ಸಭೆಗೆ ಆತನ ಚಿತ್ತವೇನೆಂಬದನ್ನು ತಿಳಿಸುತ್ತದೆ, ಡೇವಿಡ್ ಎಲ್. ರೋಪರ್ ನಮ್ಮನ್ನು ಪ್ರಥಮ ಶತಮಾನದ ಸಭೆಯ ಇತಿಹಾಸದ ಮೂಲಕ ಕರೆದೊಯ್ಯುತ್ತಾರೆ, ನಮ್ಮ ರಕ್ಷಕನ ಪರಲೋಕಾರೋಹಣದಿಂದ ಆರಂಬಗೊಂಡು ಪೌಲನ ಪ್ರಥಮ ಸುವಾರ್ತಾಪ್ರಯಾಣದೊಂದಿಗೆ ಮುಕ್ತಾಯ ಗೊಳ್ಳುತ್ತದೆ. ಮುಂದಿನ ಕೊರ್ಸ್‍ನಲ್ಲಿ, ಅಪೊಸ್ತಲರ ಕೃತ್ಯಗಳು 15-28ರಲ್ಲಿ, ಆತನು ಯೆರೂಸಲೇಮಿನಲ್ಲೆ ನಡೆದ ಸಮಾಲೋಚನಾ ಸಭೆಯಿಂದ ಆರಂಭಿಸಿ ವಾಚಕರನ್ನು ಪೌಲನು ರೋಮಾಪುರಕ್ಕೆ ಮಾಡುವ ಸೇವೆಯ ತನಕ ಕರೆದೊಯ್ಯುತ್ತಾನೆ.


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

ಅಪೊಸ್ತಲರ ಕೃತ್ಯಗಳು 1—14 ರವರು ಬರೆದಿರುವ ಡೇವಿಡ್ ಎಲ್. ರೋಪರ್ ಪುಸ್ತಕದ ಡಿಜಿಟಲ್ ಪ್ರತಿಯು ಕೋರ್ಸಿನ ನಿಮ್ಮ ಅಧ್ಯಾಪಕರಾಗಿರುತ್ತಾರೆ, ಮತ್ತು ಕೋರ್ಸ್ ಮುಗಿದ ಬಳಿಕವೂ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.

ಅಧ್ಯಯನ ನೆರವು

ಕೋರ್ಸಿನಲ್ಲಿ ನಿಮ್ಮ ಕಲಿಕೆಗೆ ಪೂರಕವಾದ ಹೆಚ್ಚುವರಿ ಅಧ್ಯಯನ ಸಾಮಗ್ರಿಗಳು ಈ ಕೋರ್ಸಿನಲ್ಲಿ ಲಭ್ಯವಿವೆ.