ನಮ್ಮ ಲೇಖಕರ ಬಗ್ಗೆ

 


ಎಡ್ಡಿ ಕ್ಲೊಯೆರ್

ಎಡ್ಡಿ ಕ್ಲೊಯೆರ್, ಆರ್ಕನ್ಸಾಸ್‍ನ ಸೆಯಾರ್ಕಿಯ ಹಾರ್ಡಿಂಗ್ ವಿಶ್ವವಿದ್ಯಾನಿಲಯ; ಓಕ್ಲಹಾಮಾ ನಗರದ ಓಕ್ಲಹಾಮ ಕ್ರಿಶ್ಚಿಯನ್ ಯುನಿವರ್ಸಿಟಿ; ಮತ್ತು ಟೆನೆಸ್ಸೀ, ಮೆಂಫಿಸ್‍ನ ಹಾರ್ಡಿಂಗ್ ಯುನಿವರ್ಸಿಟಿ ಗ್ರ್ಯಾಜುಯೇಟ್ ಸ್ಕೂಲ್ ಆಫ್ ರಿಲಿಜಿಯನ್ ನಲ್ಲಿ ವ್ಯಾಸಂಗ ಮಾಡಿದರು. ಅವರು B.A., M.Th., ಮತ್ತು D.Min. ಪದವಿಗಳನ್ನು ಪಡೆದಿರುತ್ತಾರೆ. ಅವರ ಪ್ರೌಢ ಪ್ರಬಂಧವು ಸುವಾರ್ತಾ ಬೋಧನೆಯ ವಿಷಯವಸ್ತುವನ್ನು ಹೊಂದಿದೆ. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಉಪನ್ಯಾಸ ನೀಡಲು ಆರಂಭಿಸಿರುವ ಇವರು, ನಲ್ವತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯ  ಆರ್ಕನ್ಸಾಸ್‍ನ ಕ್ಲಾರ್ಕ್ಸ್‍ವಿಲ್ಲೆ, ಹಾಟ್ ಸ್ಪ್ರಿಂಗ್ಸ್ ಮತ್ತು ಬ್ಲೈಥೆವಿಲ್ಲೆಯಲ್ಲಿ ಸುವಾರ್ತೆಯನ್ನು ಬೋಧಿಸಿದ್ದಾರೆ.  ಇವರು ಯು ಎಸ್ ಎ ಯ ಮೂವತ್ತೈದು ರಾಜ್ಯಗಳಲ್ಲಿ ಮತ್ತು ಇಂಗ್ಲೆಂಡ್, ಸಿಂಗಾಪುರ್, ಯುಕ್ರೇನ್ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ 850 ಕ್ಕಿಂತಲೂ ಹೆಚ್ಚು ಸುವಾರ್ತಾ ಸಭೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. 1981 ರಿಂದ ಕ್ಲೊಯೆರ್‍ರವರು ಬೋಧಕರಿಗೆ ಮತ್ತು ಅಧ್ಯಾಪಕರುಗಳಿಗಾಗಿ ಇರುವ  ಟ್ರೂತ್ ಫಾರ್ ಟುಡೆ, ಎಂಬ ಮಾಸಿಕ ಪ್ರಕಟನೆಯನ್ನು ಪ್ರಕಟಿಸಿದ್ದಾರೆ ಮತ್ತು ಸಂಪಾದಕರಾಗಿ ಕೆಲಸ ಮಾಡಿದ್ದಾರೆ. 1990 ರಲ್ಲಿ, ವರ್ಲ್ಡ್ ಬೈಬಲ್ ಸ್ಕೂಲ್‍ನ ಅಧ್ಯಾಪಕರು ಮತ್ತು ಟೆಕ್ಸಾಸ್, ಹ್ಯೂಸ್ಟನ್‍ನಲ್ಲಿನ ಚಾಂಪಿಯನ್ಸ್ ಚರ್ಚ್ ಆಫ್ ಕ್ರೈಸ್ಟ್ ಇವರ ನೆರವಿನೊಂದಿಗೆ, ಟ್ರೂತ್ ಫಾರ್ ಟುಡೆಯನ್ನು ಆರಂಭಿಸಿದರು. ಇದರ ವಿವರಣಾತ್ಮಕ ಬೈಬಲ್ ಅಧ್ಯಯನಗಳು 140 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿನ ಸುಮಾರು 40,000 ಬೋಧಕರಿಗೆ ಮತ್ತು ಅಧ್ಯಾಪಕರಿಗೆ ನೆರವು ನೀಡುತ್ತವೆ.
Eddie Cloer

ಸೆಲ್ಲರ್ಸ್ ಎಸ್. ಕ್ರೈನ್, ಜೂನಿಯರ್

ಡಾ. ಸೆಲ್ಲರ್ಸ್ ಎಸ್. ಕ್ರೈನ್ ಜೂನಿಯರ್ ರವರು ಕಳೆದ ಐವತ್ತು ವರ್ಷಗಳಿಂದ ಬೋಧಕರಾಗಿದ್ದಾರೆ ಮತ್ತು ಲೂಸಿಯಾನ, ಅಲಬಾಮ, ಕೆಂಟುಕಿ ಮತ್ತು ಟೆನ್ನೆಸ್ಸೀಗಳಲ್ಲಿನ ಸಭೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲಬಾಮಾದ ಅಥೆನ್ಸ್ ಸ್ಟೇಟ್ ಯುನಿವರ್ಸಿಟಿಯ ಪದವೀಧರರಾಗಿರುವ ಕ್ರೈನ್‍ರವರು ಅಲಬಾಮ ಕ್ರಿಶ್ಚಿಯನ್ ಸ್ಕೂಲ್ ಆಫ್ ರಿಲೀಜಿಯನ್ (ಈಗ ಅಮ್‍ರಿಡ್ಜ್ ಯುನಿವರ್ಸಿಟಿ) ಮತ್ತು ಲೂಥರ್ ರೈಸ್ ಸೆಮಿನರಿಗಳಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ತಮ್ಮ D.Min ಪದವಿಯನ್ನು ಡಿಯರ್ ಫೀಲ್ಡ್, ಇಲಿನೋಯಿಸ್‍ನ ಟ್ರಿನಿಟಿ ಇವ್ಯಾಂಜೆಲಿಕಲ್ ಡಿವಿನಿಟಿ ಶಾಲೆಯಿಂದ (ಈಗ ಟ್ರಿನಿಟಿ ಇಂಟರ್ ನ್ಯಾಷನಲ್ ಯುನಿವರ್ಸಿಟಿ) ಪಡೆದಿರುತ್ತಾರೆ.  ಕ್ರೈನ್ ಅವರು ಟೆನ್ನೆಸ್ಸೀ ಪಬ್ಲಿಕ್ ಸ್ಕೂಲ್ ಸಿಸ್ಟಂ ಹಾಗೂ ಇತರ ಹಲವಾರು ಬೈಬಲ್ ಅಧ್ಯಯನ ಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿರುತ್ತಾರೆ, ಗುಯಿನ್, ಅಲಬಾಮಾದ ಸ್ಕೂಲ್ ಆಫ್ ವರ್ಲ್ಡ್ ಇವ್ಯಾಂಜೆಲಿಸಂ ಮತ್ತು ಟೆನ್ನೆಸ್ಸೀ, ಮ್ಯಾಡಿಸನ್ ನ ಮಿಡ್-ಸೌತ್ ಸ್ಕೂಲ್ ಆಫ್ ಬಿಬ್ಲಿಕಲ್ ಸ್ಟಡೀಸ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಯುಕ್ರೇನ್, ಗ್ರೀಸ್, ಪೆರು ಮತ್ತು ಪನಾಮದಲ್ಲಿ  ಸಹ ಬೋಧಿಸಿದ್ದಾರೆ ಮತ್ತು ಸುವಾರ್ತೆ ಬೋಧಿಸಲು ಹನ್ನೊಂದು ದೇಶಗಳಿಗೆ ಇಪ್ಪತ್ತ ಮೂರು ಬಾರಿ ಭೇಟಿ ನೀಡಿದ್ದಾರೆ. ಒಬ್ಬ ಉತ್ತಮ ಬರಹಗಾರರಾಗಿರುವ ಕ್ರೈನ್‍ರವರು1500 ಕ್ಕೂ ಹೆಚ್ಚು ಲೇಖನಗಳನ್ನು ಮತ್ತು ಮೂವತ್ತೇಳು  ಪಠ್ಯಕ್ರಮ ಸಂಬಂಧಿತ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಲೇಖನಗಳು ಗೋಸ್ಪೆಲ್ ಅಡ್ವೊಕೇಟ್ ಮತ್ತು ಪವರ್ ಫಾರ್ ಟುಡೆ ಎಂಬ ಜರ್ನಲ್‍ಗಳಲ್ಲಿ ಪ್ರಕಟವಾಗಿವೆ.  ಐದು ವರ್ಷಗಳವರೆಗೆ, ವಯಸ್ಕರ ಪಾಠಗಳ ವಾರ್ಷಿಕ ವಿವರಣಗ್ರಂಥವಾದ ಗೋಸ್ಪೆಲ್ ಅಡ್ವೊಕೇಟ್ ಕಂಪ್ಯಾನಿಯನ್  ಅನ್ನು ಬರೆದರು. ದಿ ವರ್ಲ್ಡ್ ಇವ್ಯಾಂಜಲಿಸ್ಟ್ ನ ಸಮಿತಿಯಲ್ಲೂ ಇವರು ಸೇವೆ ಸಲ್ಲಿಸಿದ್ದಾರೆ ಮತ್ತು ಟ್ವೆಂಟಿ ಫರ್ಸ್ಟ್ ಸೆಂಚುರಿ ಕ್ರಿಶ್ಚಿಯನ್ ‍ಗಾಗಿ ಕಿರಿಯ ಮತ್ತು ಹಿರಿಯ ಬೈಬಲ್ ತರಗತಿಗಳ ಪಠ್ಯ ಸಾಮಗ್ರಿಗಳನ್ನು ಎಡಿಟ್ ಮಾಡಿದ್ದಾರೆ. ಇದರೊಂದಿಗೆ, ಅನೇಕ ಉಪನ್ಯಾಸ ಕಾರ್ಯಕ್ರಮಗಳಲ್ಲಿ, ಸುವಾರ್ತಾ ಸಭೆಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಅವರ ಪಾಠಗಳು ರೇಡಿಯೋ ಮತ್ತು ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಸಹ ಪ್ರಸಾರವಾಗಿವೆ.  ಸೆಲ್ಲರ್ಸ್ ರವರು 1961 ರಲ್ಲಿ ವಾಂಡಾ ಅವರನ್ನು ವಿವಾಹವಾಗಿರುತ್ತಾರೆ. ಅವರು ಮೂವರು ಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಹೊಂದಿದ್ದಾರೆ.
Sellers S. Crain, Jr.

ಅರ್ಲ್ ಡಿ. ಎಡ್ವರ್ಡ್ಸ್

ಡಾ. ಅರ್ಲ್ ಡಿ. ಎಡ್ವರ್ಡ್ಸ್ ತನ್ನ ಇಡಿ ಜೀವಮಾನವನ್ನು ಬೋಧನೆ, ಸೇವೆ ಮತ್ತು  ಕಲಿಕೆಯಲ್ಲಿ ದೇವರ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಅವರು ಸೆಂಟ್ರಲ್ ಕ್ರಿಶ್ಚಿಯನ್ ಕಾಲೇಜಿನಲ್ಲಿ (ಈಗ ಓಕ್ಲಹಾಮ ಕ್ರಿಶ್ಚಿಯನ್ ಯುನಿವರ್ಸಿಟಿ ಆಫ್ ಸಯನ್ಸ್ ಆಂಡ್ ಆರ್ಟ್ಸ್) ಶಿಕ್ಷಣ ಪಡೆದು, ಡೇವಿಡ್ ಲಿಪ್ಸ್ ಕೋಂಬ್ ಕಾಲೇಜಿನಲ್ಲಿ B.A. ಪದವಿ ಗಳಿಸಿದರು. ಅವರು ಹಾರ್ಡಿಂಗ್ ಗ್ರಾಜುಯೇಟ್  ಸ್ಕೂಲ್‍ನಿಂದ M.Th ಪದವಿ ಪಡೆದರು ಮತ್ತು  D.Miss ಪದವಿಯನ್ನು ಡಿಯರ್ ಫೀಲ್ಡ್, ಇಲಿನೊಯಿಸ್ ನ ಟ್ರಿನಿಟಿ ಇವ್ಯಾಂಜೆಲಿಕಲ್ ಡಿವಿನಿಟಿ ಸ್ಕೂಲ್ ನಿಂದ ಪಡೆದರು.  ಎಡ್ವರ್ಡ್ಸ್ ಅವರು 1952 ರಲ್ಲಿ ಬೋಧಕ ವೃತ್ತಿ ಆರಂಭಿಸಿದರು ಮತ್ತು  ಕಾನ್ಸಾಸ್, ಆರ್ಕನ್ಸಾಸ್, ಸಿಸಿಲಿ, ಫ್ಲೋರೆನ್ಸ್, ಇಟೆಲಿಗಳಲ್ಲಿ ಮಿನಿಸ್ಟರ್ ಆಗಿ ಸೇವೆ ಸಲ್ಲಿಸಿದರು (1960-1976). ಅವರು ಗೋಸ್ಪೆಲ್ ಅಡ್ವೊಕೇಟ್, ಸ್ಪಿರಿಚುವಲ್ ಸ್ವೋರ್ಡ್, ಮತ್ತು ಇತರ ನಿಯತಕಾಲಿಕೆಗಳಿಗೆ ಬರೆದಿದ್ದಾರೆ ಹಾಗೂ ಪ್ರೊಟೆಕ್ಟಿಂಗ್ ಅವರ್ “ಬ್ಲೈಂಡ್ ಸೈಡ್”ನ ಲೇಖಕರೂ ಆಗಿದ್ದಾರೆ. ಎಡ್ವರ್ಡ್ಸ್ ಅವರು ಹಾರ್ಡಿಂಗ್ ವಿಶ್ವವಿದ್ಯಾನಿಲಯದಲ್ಲಿ 1976 ರಿಂದ 1977 ರವರೆಗೆ ಮಿಷನ್ಸ್ ನ ವಿಸಿಟಿಂಗ್ ಪ್ರೊಫೆಸರ್ ಆಗಿ ಅಧ್ಯಾಪನ ಸೇವೆ ಸಲ್ಲಿಸಿದ್ದಾರೆ. 1982 ರಲ್ಲಿ, ಅವರು ಫ್ರೀಡ್-ಹಾರ್ಡೆಮನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು, ಅಲ್ಲಿ ಅವರು 1991 ರಿಂದ 1993 ರವರೆಗೆ ಸ್ಕೂಲ್ ಆಫ್ ಬಿಬ್ಲಿಕಲ್ ಸ್ಟಡೀಸ್‍ನ ಡೀನ್ ಆಗಿ ಮತ್ತು 1989 ರಿಂದ 2008 ರವರೆಗೆ ಗ್ರಾಜುಯೇಟ್ ಸ್ಟಡೀಸ್ ಇನ್ ಬೈಬಲ್ ನ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರು ತಮ್ಮ ಶ್ರೇಷ್ಠ ಬೋಧನೆಗಾಗಿ ಅನೇಕ ಬಾರಿ ಫ್ರೀಡ್-ಹಾರ್ಡೆಮನ್ ನಿಂದ ಅಭಿನಂದನೆ ಪಡೆದಿದ್ದಾರೆ. 1998 ರಲ್ಲಿ ಕಾಲೇಜ್ ಆಫ್ ಬಿಬ್ಲಿಕಲ್ ಅಧ್ಯಯನಗಳಿಗಾಗಿ ಓಕ್ಲಹಾಮ ಕ್ರಿಶ್ಚಿಯನ್ ಅವರನ್ನು  ಉತ್ತಮ ಹಳೆವಿದ್ಯಾರ್ಥಿಯೆಂಬುದಾಗಿ ಹೆಸರಿಸಿದೆ. 2004 ರಲ್ಲಿ,  ವಾರ್ಷಿಕ FHU ಉಪನ್ಯಾಸ ಸಭೆಯಲ್ಲಿ ಅವರು ಗೌರವ  ಔತಣ ಕೂಟದ ಆಹ್ವಾನ ಪಡೆದಿದ್ದರು. ಎಡ್ವರ್ಡ್ಸ್ ಅವರು 1953 ರಲ್ಲಿ ಗ್ವೆಂಡೊಲಿನ್ ಹಾಲ್ ಅವರನ್ನು ವಿವಾಹವಾಗಿದ್ದು, 1986 ರಲ್ಲಿ ಹಾಲ್‍ರವರು ವಿಧಿವಶರಾದರು. ಅವರಿಗೆ ಟೆರಿ ಮತ್ತು ಕಾರೆನ್ ಎಂಬ ಇಬ್ಬರು ಮಕ್ಕಳಿದ್ದು, ಎಂಟು ಮೊಮ್ಮಕ್ಕಳಿದ್ದಾರೆ. ಎಡ್ವರ್ಡ್ಸ್ ರವರು 1988 ರಲ್ಲಿ ಲೋರಾ ಯಂಗ್ ರವರೊಂದಿಗೆ ವಿವಾಹವಾದರು.
Earl D. Edwards

ವಿಲಿಯಂ ಡಬ್ಲ್ಯು. ಗ್ರಶಾಮ್

ಡಾ. ವಿಲಿಯಂ ಡಬ್ಲ್ಯು. ಗ್ರಶಾಮ್ ಅವರು ಅರುವತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ಅರಿಜೋನಾ, ಜರ್ಮನಿ ಮತ್ತು ಸ್ಕಾಟ್‍ಲ್ಯಾಂಡಿನಲ್ಲಿ ಉಪನ್ಯಾಸ ನೀಡುತ್ತಿದ್ದಾರೆ. ಅವರು ಪೆಪ್ಪರ್ ಡೈನ್ ಯುನಿವರ್ಸಿಟಿಯಿಂದ 1962 B.A. ಪದವಿ ಮತ್ತು 1968 ರಲ್ಲಿ M.A ಪದವಿಯನ್ನೂ ಹಾಗೂ 1975 ರಲ್ಲಿ ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯಿಂದ M.Div ಪದವಿಯನ್ನೂ ಪಡೆದರು. ಡೆಡ್ ಸೀ ಸ್ಕ್ರಾಲ್ಸ್ ನ ಬರಹಗಾರರಾದ, ಕುಮ್ರಾನ್ ಸಮುದಾಯದವರ (Qumran community) ಸ್ವಭಾವವನ್ನು ಪರೀಕ್ಷಿಸುವ ಪ್ರೌಢಪ್ರಬಂಧ ಪೂರ್ಣಗೊಳಿಸಿದ ಬಳಿಕ,  ಅವರು ಸ್ಕಾಟ್‍ಲ್ಯಾಂಡ್ ನ ಅಬೆರ್ಡೀನ್ ಯುನಿವರ್ಸಿಟಿಯಿಂದ 1985 ರಲ್ಲಿ Ph.D ಪದವಿ ಗಳಿಸಿದರು. 1975 ರಿಂದ 1978 ರವರೆಗೆ, ಗ್ರಶಾಮ್ ಮತ್ತು ಅವರ ಕುಟುಂಬದವರು ಜರ್ಮನಿಯ ಕೈಸರ್ ಸ್ಲಾಟರ್ನ್ ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಅವರು ಅಮೇರಿಕನ್ ಮಿಲಿಟರಿ ಸಭೆಗೆ ಬೋಧಿಸುತ್ತಿದ್ದರು. ಬಳಿಕ ಅವರು ಸ್ಕಾಟ್‍ಲ್ಯಾಂಡ್ ನ ಅಬೆರ್ಡೀನ್ ಗೆ ತೆರಳಿದರು ಮತ್ತು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅಲ್ಲಿರುವಾಗ, ದೇವರ ಚರ್ಚಿನ ಸ್ಥಳೀಯ ಕ್ರೈಸ್ತಸಭೆಯನ್ನು ಸ್ಥಾಪಿಸಲು ಅವರು ನೆರವು ನೀಡಿದರು. ಗ್ರಶಾಮ್ ಅವರು ತಮ್ಮ ಪೋಸ್ಟ್ ಡಾಕ್ಟರೇಟ್ ಅಧ್ಯಯನವನ್ನು ಜೆರೂಸಲೇಮಿನ ಹೀಬ್ರೂ ಯುನಿವರ್ಸಿಟಿಯಲ್ಲಿ ಮಾಡಿದರು ಮತ್ತು ಇಸ್ರೇಲಿನ ಟೆಲ್ ಡೊರ್ ನಲ್ಲಿ ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಅಗೆತಗಳಲ್ಲಿ ಸಹ ಭಾಗವಹಿಸಿದರು. ಹದಿನೈದು ವರ್ಷಗಳಿಗಿಂತಲೂ ಹೆಚ್ಚು ಸಮಯ, ಅವರು ಟೆಕ್ಸಾಸ್ ನ ಡಲ್ಲಾಸ್ ನಲ್ಲಿರುವ ಸೆಂಟರ್ ಫಾರ್ ಕ್ರಿಶ್ಚಿಯನ್ ಎಜುಕೇಷನ್ ನಲ್ಲಿ ಹಳೆ ಮತ್ತು ಹೊಸ ಒಡಂಬಡಿಕೆ ಹಾಗೂ ಬಿಬ್ಲಿಕಲ್ ಥಿಯಾಲಜಿಯನ್ನು ಕಲಿಸಿದರು.   ಅವರು 2005 ರಲ್ಲಿ ನಿವೃತ್ತರಾದರು ಆದರೂ ಬೈಬಲ್ ಮತ್ತು ಪುರಾತತ್ತ್ವಶಾಸ್ತ್ರ ಹಾಗೂ ಹಳೆ ಒಡಂಬಡಿಕೆಯ ಸುವಾರ್ತೆಯ ಮೇಲೆ ಅವರು ಗ್ರಾಜುಯೇಟ್ ವಿದ್ಯಾರ್ಥಿಗಳಿಗೆ ಸೆಮಿನಾರ್ ಗಳನ್ನು ನೀಡುತ್ತಾರೆ. ಅವರು ಮತ್ತು ಅವರ ಪತ್ನಿ ಎಲಿಯನಾರ್ ಗೆ ನಾಲ್ಕು ಮಕ್ಕಳು, ಹದಿನೇಳು ಮೊಮ್ಮಕ್ಕಳು ಮತ್ತು ಹನ್ನೊಂದು ಮರಿಮಕ್ಕಳಿದ್ದಾರೆ.
William W. Grasham

ಡೇಟನ್ ಕೀಸೀ

ಡೇಟನ್ ಕೀಸೀಯವರು ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯ ಪದವೀಧರರಾಗಿದ್ದಾರೆ ಮತ್ತು ಅವರು ಇಂಡಿಯಾನಾದ ಇಂಡಿಯಾನಪೊಲಿಸ್ ನ ಬಟ್ಲರ್ ಯುನಿವರ್ಸಿಟಿಯಿಂದ M.A. ಪದವಿ ಪಡೆದಿದ್ದಾರೆ ಹಾಗೂ ಭಾಷೆ ಮತ್ತು ಕೌನ್ಸೆಲಿಂಗ್ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಅವರು ಇಂಡಿಯಾನಾ, ಲೂಸಿಯಾನಾ, ಟೆಕ್ಸಾಸ್ ಮತ್ತು ಓಕ್ಲಹಾಮದಲ್ಲಿ ಪೂರ್ಣ-ಕಾಲಿಕ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ನೈಜೀರಿಯಾ, ಆಫ್ರಿಕಾದಲ್ಲಿ ಬೈಬಲ್ ತರಬೇತಿ ಶಾಲೆಗಳನ್ನು ಮತ್ತು ಬೋಧನಾ ಸೆಮಿನಾರ್ ಗಳನ್ನು ಏರ್ಪಡಿಸಿದ್ದಾರೆ.  ಅವರ ಅಧ್ಯಾಪಕ ವೃತ್ತಿ ಹಾಗೂ ಮಿಷನ್ ಕೆಲಸ ವರನ್ನು ಕೆನಡಾ, ಯುಕ್ರೇನ್, ಭಾರತ, ದಕ್ಷಿಣ ಆಫ್ರಿಕಾ, ಟ್ರಿನಿಡಾದ್ ಮತ್ತು ರಷ್ಯಾ ದೇಶಕ್ಕೆ ಕೊಂಡೊಯ್ದಿದೆ. ಇಪ್ಪತ್ತೊಂದು ವರ್ಷಗಳ ತನಕ ಅವರು ಲಬ್ಬೋಕ್ ನ ಸನ್ ಸೆಟ್ ಸ್ಕೂಲ್ ಆಫ್ ಪ್ರೀಚಿಂಗ್ (ಈಗ ಸನ್ ಸೆಟ್ ಇಂಟರ್ ನ್ಯಾಷನಲ್ ಬೈಬಲ್ ಇನ್ಸ್ಟಿಟ್ಯೂಟ್) ಇಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸಿದರು.  ಈ ಸಮಯದಲ್ಲಿ ಅವರು ಸುವಾರ್ತಾ ಸಭೆಗಳನ್ನು, ವರ್ಕ್‍ಶಾಪ್ ಗಳ ನಾಯಕತ್ವವನ್ನು, ಕ್ರಿಶ್ಚಿಯನ್ ಹೋಂ ಸೆಮಿನರಿಗಳನ್ನು ಮತ್ತು ಶಿಕ್ಷಕ ತರಬೇತಿ ಕೋರ್ಸುಗಳನ್ನು ಕನಿಷ್ಠ ಮೂವತ್ತೈದು ರಾಜ್ಯಗಳಲ್ಲಿ ನಡೆಸಿದ್ದಾರೆ. ತರಗತಿಯ ಶಿಕ್ಷಕರಾಗಿ  ಸಹೋದರ ಕೀಸೀಯವರ ಕೆಲಸಗಳು ಸನ್ ಸೆಟ್‍ನ ಸ್ಯಾಟೆಲೈಟ್ ಸ್ಕೂಲ್ ಪ್ರೋಂಗ್ರಾಂವರೆಗೂ ಹಬ್ಬಿವೆ, ಈ ಪ್ರೋಂಗ್ರಾಂ, ಕ್ರಿಶ್ಚಿಯನ್ ಹೋಂ ಮತ್ತು ಬುಕ್ ಆಫ್ ಜೆರೆಮಿಯಾದ (ಯೆರೆಮೀಯನ ಪುಸ್ತಕ) ಮೇಲೆ ಕೋರ್ಸುಗಳನ್ನು ಒಳಗೊಂದಿವೆ.  ಒಬ್ಬ ಲೇಖಕರಾಗಿ, ಅವರು  ರಿಸ್ಟೋರೇಶನ್ ರಿವೈವಲ್: ದಿ ವೇ (ಬ್ಯಾಕ್) ಟು ಗಾಡ್, ಹೀಬ್ರೂಸ್: ಎ ಹೆವನ್ಲೀ ಹೋಮಿಲಿ, ಎ ರಿ-ಇವ್ಯಾಲುಯೇಷನ್ ಆಫ್ ದಿ ಎಲ್ಡರ್ ಶಿಪ್, ಟೀಚರ್ ಟ್ರೈನಿಂಗ್ ಟೂಲ್ಸ್, ಎ ಕೋನಿಲಾಜಿಕಲ್ ಸರ್ವೇ ಆಫ್ ದಿ ಓಲ್ಡ್ ಟೆಸ್ಟಮೆಂಟ್  ಮತ್ತು ದಿ ಚರ್ಚಸ್ ಆಫ್ ಕ್ರೈಸ್ಟ್ ಡೂರಿಂಗ್ ದಿ ಸಿವಿಲ್ ವಾರ್  ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಮತ್ತು ಅವರ ಪತ್ನಿ ರೂತ್ ಗೆ ಮೂವರು ಬೆಳೆದ ಮಕ್ಕಳಿದ್ದಾರೆ: ಡಿಟಾ ಸಿಮೆಯೋನಾ ಆಫ್ ಹವಾಯ್, ಟೋಂಜಾ ರಾಂಬೊ ಆಫ್ ಅಲಾಸ್ಕ ಮತ್ತು ಡ್ಯಾರೆನ್ ಕೀಸೀ ಆಫ್ ಟೆಕ್ಸಾಸ್.
Dayton Keesee

 ಜಯ್ ಲೊಖಾರ್ಟ್

ಪಶ್ಚಿಮ ವರ್ಜೀನಿಯಾದ ಜಯ್ ಲೊಖಾರ್ಟ್ ರವರು ಫ್ರೀಡ್-ಹಾರ್ಡೆಮನ್ ಯುನಿವರ್ಸಿಟಿ ಮತ್ತು ಲಿಪ್ಸ್ ಕೋಂಬ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದು ಬೈಬಲ್‍ನಲ್ಲಿ B.A.  ಪದವಿ ಪಡೆದರು. ಅವರು ಹಾರ್ಡಿಂಗ್ ಗ್ರಾಜುಯೇಟ್ ಸ್ಕೂಲ್ ಆಫ್ ರಿಲಿಜಿಯನ್ ನಿಂದ ಹೊಸ ಒಡಂಬಡಿಕೆ ಎಂಬ ವಿಷಯದಲ್ಲಿ M.A. ಪದವಿ ಗಳಿಸಿದರು. ಟ್ರಿನಿಟಿ ಥಿಯಾಲಾಜಿಕಲ್ ಸೆಮಿನರಿಯಿಂದ ಚರ್ಚ್ ಆಡಳಿತದಲ್ಲಿ ಹೆಚ್ಚಿನ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಲೊಖಾರ್ಟ್‍ರವರು ಟೆಕ್ಸಾಸ್ ನ ಟೈಲರ್ ನಲ್ಲಿ ಇಪ್ಪತ್ತ ಮೂರು ವರ್ಷಗಳವರೆಗ ಧರ್ಮಬೋಧಕರ ಮಂಡಳಿಯ ಅಧಿಕಾರಿಯಾಗಿ (pulpit minister) ಸೇವೆ ಸಲ್ಲಿಸಿದರು, ಮತ್ತು ಈಗ ಅವರು ಕೆಂಟುಕಿಯಲ್ಲಿನ ಬೆಂಟನ್ ಚರ್ಚ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಅವರು ಟೆಲಿವಿಷನ್ ಮತ್ತು ರೇಡಿಯೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಮತ್ತು ಹಲವಾರು ಕ್ರಿಶ್ಚಿಯನ್ ಪ್ರಕಟನೆಗಳಿಗೆ ಬರೆದಿದ್ದಾರೆ. ಅವರು 1997 ರಿಂದ ಫ್ರೀಡ್-ಹಾರ್ಡೆಮನ್ ಯುನಿವರ್ಸಿಟಿಯ ಟ್ರಸ್ಟಿ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಲೊಖಾರ್ಟ್ ಮತ್ತು ಅವರ ಹೆಂಡತಿ ಅರ್ಲೀನ್ ಗೆ ಮೂವರು ಮಕ್ಕಳಿದ್ದು ಆರು ಮಂದಿ ಮೊಮ್ಮಕ್ಕಳಿದ್ದಾರೆ.
Jay Lockhart

ಜಾಕ್ ಮ್ಯಾಕಿನ್ನೇ

ಜಾನ್ (ಜಾಕ್) ಟಿ. ಮ್ಯಾಕಿನ್ನೇ 1927 ರಲ್ಲಿ ಟೆಕ್ಸಾಸ್ನ ಸ್ವೀನಿ ಯಲ್ಲಿ ಜನಿಸಿದರು. ಪ್ರೌಢಶಾಲೆಯಿಂದ ಪದವಿ ಪಡೆದ ನಂತರ (1944), ಅವರು ವಿಶ್ವ ಸಮರ II ರ ಅಂತಿಮ ದಿನಗಳಲ್ಲಿ ಯುಎಸ್ ನೌಕಾಪಡೆಯಲ್ಲಿ ಪೆಸಿಫಿಕ್ನಲ್ಲಿ ಸೇವೆ ಸಲ್ಲಿಸಿದರು. ತನ್ನ ಕರ್ತವ್ಯ ಪ್ರವಾಸದ ನಂತರ, ಟೆಕ್ಸಾಸ್ನ ಅಬಿಲೀನ್ನ ಅಬಿಲೆನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ (1949) ಜಾಕ್ ಪದವಿಯನ್ನು ಪಡೆದರು. ಅವರು ಹೈಡೆಲ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಜರ್ಮನ್ ಭಾಷೆಯನ್ನು ಮತ್ತು ಪ್ಯಾರಿಸ್ನಲ್ಲಿ ಫ್ರೆಂಚ್ ಭಾಷೆಯನ್ನು ಅಧ್ಯಯನ ಮಾಡಿದರು.

ಯುಎಸ್ಗೆ ಹಿಂತಿರುಗಿದ ನಂತರ, ಜಾಕ್ ಆಸ್ಟಿನ್ ಮತ್ತು ಸ್ಯಾನ್ ಏಂಜೆಲೋ, ಟೆಕ್ಸಾಸ್ನಲ್ಲಿನ ಸಭೆಗಳೊಂದಿಗೆ ಕೆಲಸ ಮಾಡಿದರು ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಜರ್ಮನಿಯ ಬೋಧನಾ ಸಹಾಯಕರಾಗಿದ್ದರು. ನಂತರ ಅವರು ಅಬಿಲೆನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ (1952-1955) ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿಸಿದರು. ಅವರು ಫ್ರಾಂಕ್ಫರ್ಟ್ ಮತ್ತು ಚೆಮ್ನಿಟ್ಜ್, ಜರ್ಮನಿ, ಮತ್ತು ಸ್ವಿಟ್ಜರ್ಲೆಂಡ್ನ, ಜುರಿಚ್ನಲ್ಲಿ ಮಿಷನ್ ಕೆಲಸವನ್ನು ನಡೆಸಿದರು. ಜಾಕ್ ಅಬಿಲೀನ್ ಕ್ರಿಶ್ಚಿಯನ್ ಕಾಲೇಜ್ಗೆ ಮರಳಿದರು, ಅಲ್ಲಿ ಅವರು ಗ್ರೀಕ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು (1966). ಆ ಅವಧಿಯಲ್ಲಿ, ಅವರು ಟೆಕ್ಸಾಸ್ನ ಟ್ರೆಂಟ್ನಲ್ಲಿ ಕ್ರಿಸ್ತನ ಸಭೆಯಲ್ಲಿ ಬೋಧಿಸಿದರು. ನಂತರ ಕುಟುಂಬವು ಮಿಷನ್ ಕೆಲಸಕ್ಕಾಗಿ (1966-1974) ಜುರಿಚ್ಗೆ ಮರಳಿತು. ಆ ಸಮಯದ ಕೊನೆಯಲ್ಲಿ, ಹೈಡೆಲ್ಬರ್ಗ್ನ ಪೆಪ್ಪರ್ಡೈನ್ ವಿಶ್ವವಿದ್ಯಾಲಯದಲ್ಲಿ ಜಾಕ್ ಸಹ ಬೈಬಲ್ ಬೋಧಕನಾಗಿ ಸೇವೆ ಸಲ್ಲಿಸಿದರು. ಸುಮಾರು ಮುಂದಿನ ಇಪ್ಪತ್ತು ವರ್ಷಗಳ ಕಾಲ, ಜಾಕ್ ಬೈಬಲ್ ಮತ್ತು ಬೈಬಲ್ ಭಾಷೆಗಳನ್ನು ಸಿರ್ಸಿ, ಅರ್ಕಾನ್ಸಾಸ್ನ ಹಾರ್ಡಿಂಗ್ ವಿಶ್ವವಿದ್ಯಾನಿಲಯದಲ್ಲಿ ಕಲಿಸಿದರು (1974-1992). ಅವರು 86 ನೇ ವಯಸ್ಸಿನಲ್ಲಿ, 2014 ರಲ್ಲಿ ಕರ್ತನ ಜೊತೆ ಸೇರಿದರು.

ಜಾಕ್ ಮತ್ತು ಅವರ ಪತ್ನಿ, ಮಾಜಿ ಜೊವಾನ್ನೆ ವಿಲ್ಕಿನ್ಸನ್, ನಾಲ್ಕು ಮಕ್ಕಳು, ಎಂಟು ಮೊಮ್ಮಕ್ಕಳು, ಮತ್ತು ಆರು ಮೊಮ್ಮಕ್ಕಳೊಂದಿಗೆ ಆಶೀರ್ವಾದವನ್ನು ಪಡೆದರು.

Jack McKinney

ಬ್ರೂಸ್ ಮೆಕ್ ಲಾರ್ಟಿ

ಬ್ರೂಸ್ ಮೆಕ್ ಲಾರ್ಟಿಯವರು ಹಾರ್ಡಿಂಗ್ ಯುನಿವರ್ಸಿಟಿಯ ಅಧ್ಯಕ್ಷರಾಗಿದ್ದಾರೆ. ಅವರು ಹಾರ್ಡಿಂಗ್ ಯುನಿವರ್ಸಿಟಿಯಿಂದ ಬೈಬಲ್ ನಲ್ಲಿ B.A. ಪದವಿಯನ್ನೂ ಹಾರ್ಡಿಂಗ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ರಿಲಿಜಿಯನ್ ನಿಂದ M.Th ಪದವಿಯನ್ನೂ ಪಡೆದರು. ಅವರು ಓಹಿಯೋದ ಆಶ್ ಲ್ಯಾಂಡ್ ನಲ್ಲಿರುವ ಆಶ್ ಲ್ಯಾಂಡ್ ಥಿಯೊಲಾಜಿಕಲ್ ಸೆಮಿನರಿಯಿಂದ D.Min ಪದವಿಯನ್ನು ಪಡೆದಿರುತ್ತಾರೆ. 1999 ರಲ್ಲಿ, ಅವರು ಬೈಬಲ್ ನಲ್ಲಿ  ಹಾರ್ಡಿಂಗ್ ನ “ಶ್ರೇಷ್ಠ ವಿದ್ಯಾರ್ಥಿ” ಯೆಂಬುದಾಗಿ ಕರೆಯಲ್ಪಟ್ಟರು.   ಮೆಕ್ ಲಾರ್ಟಿಯವರು ನಮ್ಮ ಈ ಮಾಲಿಕೆಗೆ ತಮ್ಮ ಮಿನಿಸ್ಟ್ರಿ ಅನುಭವದ ಧಾರೆ ಸುರಿದಿದ್ದಾರೆ.  ಅವರು ಆರ್ಕನ್ಸಾಸ್, ಮಿಸ್ಸಿಸಿಪ್ಪಿ ಮತ್ತು ಟೆನ್ನೆಸ್ಸೀಯ ಚರ್ಚುಗಳಲ್ಲಿ ಬೋಧನೆ ನೀಡಿದ್ದಾರೆ.  ಎರಡು ವರ್ಷಗಳವರೆಗೆ ಅವರು ಮತ್ತು ಅವರ ಕುಟುಂಬದವರು ಕೀನ್ಯಾದ ಮೆರುವಿನಲ್ಲಿ ಮಿಶನರಿಗಳಾಗಿದ್ದರು. 1991 ರಿಂದ 2005 ರವರೆಗೆ, ಅವರು ಆರ್ಕನ್ಸಾಸ್ ನ ಸೆಯಾರ್ಕಿನಲ್ಲಿರುವ ಕಾಲೇಜ್ ಚರ್ಚ್ ಆಫ್ ಕ್ರೈಸ್ಟ್ ನಲ್ಲಿ ಧರ್ಮಬೋಧಕ ಮಂಡಳಿಯ ಅಧಿಕಾರಿಯಾಗಿ (pulpit minister) ಸೇವೆ ಸಲ್ಲಿಸಿದ್ದಾರೆ. ಅವರು ಮತ್ತು ಅವರ ಪತ್ನಿ ಆನ್ ರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರ ಹೆಸರು ಚಾರಿಟಿ ಮತ್ತು ಜೆಸ್ಸಿಕಾ ಆಗಿದೆ.
Bruce McLarty

ಎಡ್ವರ್ಡ್ ಪಿ. ಮೈಯರ್ಸ್

ಎಡ್ವರ್ಡ್ ಪಿ. ಮೈಯರ್ಸ್‍ರವರು ಆರ್ಕನ್ಸಾಸ್, ಸೆಯಾರ್ಕಿಯಲ್ಲಿಯ ಹಾರ್ಡಿಂಗ್ ಯುನಿವರ್ಸಿಟಿಯಲ್ಲಿ ಬೈಬಲ್ ಮತ್ತು ಕ್ರಿಶ್ಚಿಯನ್ ಸಿದ್ಧಾಂತದ ಪ್ರೊಫೆಸರ್ ಆಗಿದ್ದಾರೆ. ಅವರು ಟೆಕ್ಸಾಸ್, ಓಕ್ಲಹಾಮ, ಓಹಿಯೋ, ಪಶ್ಚಿಮ ವರ್ಜೀನಿಯಾ, ಟೆನ್ನೆಸ್ಸೀ ಮತ್ತು ಆರ್ಕನ್ಸಾಸ್ ನಲ್ಲಿನ ಕ್ರೈಸ್ತಸಭೆಗಳಲ್ಲಿ ಮಿನಿಸ್ಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಲೂಥರ್ ರೈಸ್ ಸೆಮಿನರಿಯಿಂದ D.Min. ಪದವಿಯನ್ನೂ ಡ್ರೂ ಯುನಿವರ್ಸಿಟಿಯಿಂದ Ph.D ಪದವಿಯನ್ನೂ ಪಡೆದಿರುತ್ತಾರೆ.  ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳೆಂದರೆ  ಎ ಸ್ಟಡಿ ಆಫ್ ಏಂಜೆಲ್ಸ್, ಈವಿಲ್ ಆಂಡ್ ಸಫರಿಂಗ್, ಮತ್ತು ಆಫ್ಟರ್ ದೀಸ್ ಥಿಂಗ್ಸ್ ಐ ಸಾ: ಎ ಸ್ಟಡಿ ಆಫ್ ರಿವಿಲೇಷನ್.  ಅವರು ಮತ್ತು ಅವರ ಪತ್ನಿ ಜಾನಿಸ್‍ಗೆ ಕ್ಯಾಂಡಿ, ಕ್ರಿಸ್ಟಿ ಮತ್ತು ಕೆರೋಲಿನ್ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ .
Edward P. Myers

 ಒವೆನ್ ಡಿ. ಆಲ್ಬ್ರಿಕ್ಟ್

ಒವೆನ್ ಡಿ. ಆಲ್ಬ್ರಿಕ್ಟ್ ರವರು ಮಿಸ್ಸೋರಿಯ ಥೈಯರ್ ನಲ್ಲಿ ಹುಟ್ಟಿದರು ಹಾಗೂ ಹಾರ್ಡಿಂಗ್ ಯುನಿವರ್ಸಿಟಿಯಿಂದ ಮಾತುಗಾರಿಕೆಯಲ್ಲಿ B.A. ಪದವಿ ಪಡೆದರು. ಅವರು ಹಾರ್ಡಿಂಗ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ರಿಲಿಜಿಯನ್ ನಿಂದ ಬೈಬಲ್ ನಲ್ಲಿ M.A. ಮತ್ತು M.R.E ಪದವಿಗಳನ್ನು ಪಡೆದರು.  1980 ರಲ್ಲಿ ಹಾರ್ಡಿಂಗ್ ಯುನಿವರ್ಸಿಟಿ ಅವರನ್ನು ಬೈಬಲ್ ನಲ್ಲಿ “ಶ್ರೇಷ್ಠ ವಿದ್ಯಾರ್ಥಿ” ಎಂಬ ಉಪಾಧಿಯೊಂದಿಗೆ ಗೌರವಿಸಿತು. ಆಲ್ಬ್ರಿಕ್ಟ್ ರವರು ಮಿನಿಸ್ಟ್ರಿಗಾಗಿ ತಮ್ಮ ಇಡಿ ಬದುಕನ್ನೇ ವ್ಯಯಿಸಿದ್ದಾರೆ.  ಅವರು ಆರ್ಕನ್ಸಾಸ್, ಮಿಸ್ಸೋರಿ ಮತ್ತು ನ್ಯೂಜೆರ್ಸಿಯಲ್ಲಿನ ಚರ್ಚುಗಳಿಗೆ ಅವರು ಸ್ಥಳೀಯ ಮಿನಿಸ್ಟ್ರಿಗಳಲ್ಲಿ ಕೆಲಸ ಮಾಡಿದ್ದಾರೆ.   1964 ರಲ್ಲಿ, ಅವರು ಯುಎಸ್ ನಲ್ಲಿರುವ ನಾರ್ತ್ ಈಸ್ಟ್/ಸೌತ್ ಈಸ್ಟ್ ಕ್ಯಾಂಪೇನ್ ಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಈ ಯತ್ನಗಳು ಸುಮಾರು ಮುನ್ನೂರಕ್ಲೂಕಿಂತಲೂ ಹೆಚ್ಚು ಕ್ಯಾಂಪೇನುಗಳು ಮತ್ತು ಮೂರು ಸಾವಿರ ದೀಕ್ಷಾಸ್ನಾನಗಳಿಗೆ ಕಾರಣವಾದವು.  ಇವರು ಇಂಗ್ಲೆಂಡ್, ಯುಕ್ರೇನ್, ರಷ್ಯಾ, ಕೆನಡಾ, ಮೆಕ್ಸಿಕೋ, ಹೈಟಿ, ಜಮೈಕಾ, ವೆನಿಜುವೇಲಾ ಮತ್ತು ಯು ಎಸ್ ನ ಮೂವತ್ತು ರಾಜ್ಯಗಳಲ್ಲಿ ಸುವಾರ್ತಾ ಸೇವೆ ಸಲ್ಲಿಸಿರುತ್ತಾರೆ.
Owen D. Olbricht

ಮಾರ್ಟೆಲ್ ಪೇಸ್

ಮಾರ್ಟೆಲ್ ಪೇಸ್‍ರವರು ಆರ್ಕನ್ಸಾಸ್‍ನಲ್ಲಿ ಹುಟ್ಟಿದರು ಮತ್ತು ಮಿಚಿಗನ್ ನ ಫ್ಲಿಂಟ್ ನಲ್ಲಿ ಶಿಕ್ಷಣ ಪಡೆದರು. ಅವರು ತಮ್ಮ ಮೊದಲ ಉಪನ್ಯಾಸವನ್ನು 1952 ರಲ್ಲಿ, ತಮ್ಮ ಹದಿನೇಳನೆ ವಯಸ್ಸಿನಲ್ಲಿ ನೀಡಿದರು, ಮತ್ತು 1956 ರಲ್ಲಿ ಪೂರ್ಣಾವಧಿಯ ಬೋಧನಾವೃತ್ತಿಯನ್ನು ಆರಂಭಿಸಿದರು. ತಮ್ಮ ಐವತ್ತಕ್ಕೂ ಹೆಚ್ಚು ವರ್ಷಗಳ ಬೋಧನಾ ಅವಧಿಯಲ್ಲಿ  ಪೇಸ್‍ರವರು ಆರ್ಕನ್ಸಾಸ್, ಮಿಚಿಗನ್, ಮಿಸ್ಸೋರಿ ಮತ್ತು ಅಲಬಾಮಾದ ಕ್ರೈಸ್ತಸಭೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಅಲಬಾಮಾದ ಮೋಟ್ಗೊಮೆರಿಯಲ್ಲಿನ ಯುನಿವರ್ಸಿಟಿ ಚರ್ಚ್ ಆಫ್ ಕ್ರೈಸ್ಟ್ ನಲ್ಲಿ ಇನ್ವಾಲ್ವ್ ಮೆಂಟ್ ಮಿನಿಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಲಬಾಮಾದ ಮೋಟ್ಗೊಮೆರಿಯಲ್ಲಿನ ಫಾವುಲ್ಕ್ ನರ್ ಯುನಿವರ್ಸಿಟಿಯ ವಿ.ಪಿ. ಬ್ಲಾಕ್ ಕಾಲೇಜ್ ಆಫ್ ಬಿಬ್ಲಿಕಲ್ ಸ್ಟಡೀಸ್ ನಲ್ಲಿ ಅರೆಕಾಲಿಕ ಅಧ್ಯಾಪನ ವೃತ್ತಿ ಮಾಡುತ್ತಿದ್ದಾರೆ.   ಪೇಸ್ ರವರು ಟೆನ್ನೆಸ್ಸೀ, ಹೆಂಡರ್ಸನ್‍ನಲ್ಲಿರುವ ಫ್ರೀಡ್-ಹಾರ್ಡೆಮನ್ ಯುನಿವರ್ಸಿಟಿ; ಆರ್ಕನ್ಸಾಸ್ ಸೆಯಾರ್ಕಿಯಲ್ಲಿನ ಹಾರ್ಡಿಂಗ್ ಯುನಿವರ್ಸಿಟಿ; ಟೆನ್ನೆಸ್ಸೀ, ಮೆಂಫಿಸ್ ನಲ್ಲಿರುವ ದಿ ಹಾರ್ಡಿಂಗ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ರಿಲೀಜಿಯನ್; ಅಲಬಾಮಾದ ಮೋಟ್ಗೊಮೆರಿಯಲ್ಲಿನ ರೀಜನ್ಸ್ ಯುನಿವರ್ಸಿಟಿಯಲ್ಲಿ (ಮೊದಲು ಸದರ್ನ್ ಕ್ರಿಶ್ಚಿಯನ್ ಯುನಿವರ್ಸಿಟಿ ಎಂದು ಕರೆಯಲಾಗುತ್ತಿತ್ತು) ಶಿಕ್ಷಣವನ್ನು ಪದೆದಿರುತ್ತಾರೆ.  B.A., M.A., ಮತ್ತು M.Div. ಪದವಿಗಳನ್ನು ಪಡೆದಿದ್ದಾರೆ. ಅವರು ದಿ ಥರ್ಡ್ ಇನ್ಕಾರ್ನೇಷನ್ ನ  ಲೇಖಕರಾಗಿದ್ದಾರೆ. ಮಾರ್ಟೆಲ್ ಮತ್ತು ಅವರ ಪತ್ನಿ ಡೋರಿಸ್ ರವರಿಗೆ ಮೂರು ಮಕ್ಕಳಿದ್ದು ಒಂಬತ್ತು ಮಂದಿ ಮೊಮ್ಮಕ್ಕಳಿದ್ದಾರೆ.
Martel Pace

ಡೆನ್ನಿ ಪೆಟ್ರಿಲ್ಲೊ

ಡೆನ್ನಿ ಪೆಟ್ರಿಲ್ಲೊ ಇವರು ಡೆನ್ವೆರ್ ನ ಬೇರ್ ವ್ಯಾಲಿ ಬೈಬಲ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷರಾಗಿದ್ದಾರೆ. ಅವರು ಅಲ್ಲಿನ ವಿದ್ಯಾರ್ಥಿಯಾಗಿದ್ದರು ಮತ್ತು ಹಾರ್ಡಿಂಗ್ ಯುನಿವರ್ಸಿಟಿಯ ಯಾರ್ಕ್ ಕಾಲೇಜು, ಮತ್ತು ಹಾರ್ಡಿಂಗ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ರಿಲೀಜಿಯನ್ ನಲ್ಲಿ ವ್ಯಾಸಂಗ್ ಮಾಡಿ A.A, B.A ಮತ್ತು M.A ಪದವಿಗಳನ್ನು ಗಳಿಸಿದರು.  ಅವರು ಯುನಿವರ್ಸಿಟಿ ಆಫ್ ನೆಬ್ರಾಸ್ಕಾದಿಂದ ಧಾರ್ಮಿಕ ಶಿಕ್ಷಣದಲ್ಲಿ ತಮ್ಮ Ph.D. ಪದವಿ ಪಡೆದರು.  ಪೆಟ್ರಿಲ್ಲೊರವರು ತಮ್ಮ ವೃತ್ತಿಯನ್ನು ಬೋಧನೆ ಮತ್ತು ಅಧ್ಯಾಪನಕ್ಕಾಗಿ ಮೀಸಲಿಟ್ಟರು. ಅವರು ಮಿಸ್ಸಿಸಿಪ್ಪಿಯಲ್ಲಿ ಪೂರ್ಣಕಾಲಿಕ ಬೋಧನೆ ಮಾಡುತ್ತಿದ್ದರು ಮತ್ತು ಯುನೈಟೇಡ್ ಸ್ಟೇಟ್ಸ್ ಹಾಗೂ ಜರ್ಮನಿ, ಸ್ಪೇನ್, ಪನಾಮ, ಅರ್ಜಂಟೀನಾ, ಆಫ್ರಿಕಾ ಮತ್ತು ಯುಕ್ರೇನ್ ಒಳಗೊಂಡಂತೆ ವಿದೇಶಗಳಲ್ಲಿ 300 ಕ್ಕಿಂತಲೂ ಹೆಚ್ಚಿನ ಸುವಾರ್ತಾ ಸಭೆಗಳನ್ನು ಮತ್ತು ಸೆಮಿನರಿಗಳನ್ನು ಏರ್ಪಡಿಸಿದ್ದಾರೆ.  ಡಾ ಪೆಟ್ರಿಲ್ಲೊರವರು ಮಂಗೋಲಿಯಾ ಬೈಬಲ್ ಕಾಲೇಜು, ಯಾರ್ಕ್ ಕಾಲೇಜು, ಮತ್ತು ಡೆನೆವರ್ ನ ಬೇರ್ ವ್ಯಾಲಿ ಬೈಬಲ್ ಇನ್ಸ್ಟಿಟ್ಯೂಟ್ ನಲ್ಲಿ ಬೈಬಲನ್ನು ಬೋಧಿಸಿದ್ದಾರೆ.  ಪೆಟ್ರಿಲ್ಲೋರವರ  ಬರಹಗಳಲ್ಲಿ ಎಜೆಕಿಯಲನು ಬರೆದ ಪುಸ್ತಕ, 1, 2 ತಿಮೊಥಿ ಮತ್ತು ತೀತನು ಬರೆದ ಪುಸ್ತಕಗಳ ಮೇಲಿನ ಟಿಪ್ಪಣಿ ಮತ್ತು ಮೈನರ್ ಪ್ರೊಫೆಟ್ಸ್ ಸ್ಟಡಿ ಗೈಡ್  ಇವು ಸೇರಿವೆ.  ಅವರು ಮತ್ತು ಅವರ ಪತ್ನಿ ಕ್ಯಾಥಿಗೆ ಲ್ಯಾನ್ಸ್, ಬ್ರೆಟ್ ಮತ್ತು ಲೋರಾ ಎಂಬ ಮೂವರು ಮಕ್ಕಳಿದ್ದಾರೆ.
Denny Petrillo

ನೀಲ್ ಟಿ. ಪ್ರೈಯರ್

 ದಿವಂಗತ ನೀಲ್ ಟಿ. ಫ್ರೈಯರ್ ರವ್ರು ನ್ಯೂ ಆರ್ಲೀನ್ಸ್ ಬ್ಯಾಪ್ಟಿಸ್ಟ್ ಸೆಮಿನರಿಯಿಂದ Th.D ಪದವಿ ಪಡೆದರು. ಅವರು ನಲವತ್ತೈದು ವರ್ಷಗಳವರೆಗೆ ಹಾರ್ಡಿಂಗ್ ಯುನಿವರ್ಸಿಟಿಯ  ಪ್ರಸಿದ್ಧ ಬೈಬಲ್ ಪ್ರೊಫೆಸರ್ ಆಗಿದ್ದರು ಮತ್ತು ಬೈಬಲ್ ವಿಭಾಗದ ಅಧ್ಯಕ್ಷರಾಗಿ ಮತ್ತು ಶೈಕ್ಷಣಿಕ ವಿಷಯಗಳ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರೈಯರ್ ರವರು  ಯು ಕ್ಯಾನ್ ಟ್ರಸ್ಟ್ ಯುವರ್ ಬೈಬಲ್  ಎಂಬ ಪುಸ್ತಕವನ್ನು ಬರೆದಿದ್ದಾರೆ. ಹಲವಾರು ವರ್ಷಗಳ ತನಕ ಅವರು ನಲವತ್ತು ರಾಜ್ಯಗಳಲ್ಲಿ ಐನೂರಕ್ಕಿಂತಲೂ ಹೆಚ್ಚು ಸುವಾರ್ತಾ ಸಭೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಅವರು ಸೆಯಾರ್ಕಿಯಲ್ಲಿರುವ ಕಾಲೇಜ್ ಚರ್ಚ್ ಆಫ್ ಕ್ರೈಸ್ಟ್ ನ ಅಧಿಕಾರಿಯಾಗಿದ್ದರು.  ಅವರು ಮತ್ತು ಅವರ ಪತ್ನಿ ಟ್ರೆವಾ ಐವತ್ತೊಂದು ವರ್ಷಗಳ ದಾಂಪತ್ಯಜೀವನ ನಡೆಸಿದರು. ಅಲನ್ ಮತ್ತು ಲೋರಿ ಅವರ ಮಕ್ಕಳು.
Neale T. Pryor

ಡೇವಿಡ್ ಆರ್. ರೆಕ್ಟಿನ್

ಡೇವಿಡ್ ಆರ್. ರೆಕ್ಟಿನ್ ರವರು ನಲವತ್ತೈದು ವರ್ಷಗಳಿಂದ ಸುವಾರ್ತೆ ಬೋಧಿಸುತ್ತಿದ್ದು ಕಳೆದ ಮೂವತ್ತೈದು ವರ್ಷಗಳನ್ನು ಟೆಕ್ಸಾಸ್ ನಲ್ಲಿರುವ ಡಂಕನ್ ವಿಲ್ಲೆ ಕ್ಲಾರ್ಕ್ ರೋಡ್ ನ ಕ್ರೈಸ್ತಸಭೆಯಲ್ಲಿ (ಮೊದಲು ಸಾನೆರ್ ಅವೆನ್ಯೂ ಚರ್ಚ್ ಆಫ್ ಕ್ರೈಸ್ಟ್ ಎಂದು ಕರೆಯಲ್ಪಡುತ್ತಿತ್ತು) ಸುವಾರ್ತಾಬೋಧನೆಯಲ್ಲಿ ಕಳೆದಿದ್ದಾರೆ. ಅವರು ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯಿಂದ ಬೈಬಲ್ ಅಧ್ಯಯನದಲ್ಲಿ M.A ಪದವಿ ಪಡೆದಿದ್ದಾರೆ. “ದೇವರ ಇಚ್ಛೆಯನ್ನು  ನಿರ್ಧರಿಸುವುದು ಹೇಗೆ” ಮತ್ತು “ದೇವರೊಂದಿಗೆ ಸಂಬಂಧ ಹೊಂದುವುದು ಹೇಗೆ” ಎಂಬಂಥ ವಿಷಯಗಳ ಮೇಲೆ ಅವರು ಉಪನ್ಯಾಸ ನೀಡಿದ್ದಾರೆ. ಅವರು ಮತ್ತು ಅವರ ಪತ್ನಿ ಶರೋನ್ ಗೆ ಜೇಮ್ಸ್ ಮತ್ತು ಡೇನಿಯಲ್ ಎಂಬಿಬ್ಬರು ಗಂಡುಮಕ್ಕಳಿದ್ದಾರೆ.
David R. Rechtin

 ಕೋಯ್ ಡಿ. ರೋಪರ್

ಡಾ. ಕೋಯ್ ಡಿ. ರೋಪರ್ ರವರು ಓಕ್ಲಹಾಮದ ಡಿಲ್ ನಗರದಲ್ಲಿ ಜನಿಸಿದರು ಮತ್ತು ತಮ್ಮ ಜೀವನದುದ್ದಕ್ಕೂ ಬೋಧಕರಾಗಿ, ಅಧ್ಯಾಪಕರಾಗಿ ಮತ್ತು ಲೇಖಕರಾಗಿ ಸೇವೆ ಸಲ್ಲಿಸಿದ್ದಾರೆ. ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯಲ್ಲಿ ಬೈಬಲ್ ನಲ್ಲಿ B.S ಪದವಿ ಪಡೆದ ಬಳಿಕ (1958), ನೋರ್ತ್ ಈಸ್ಟರ್ನ್ ಸ್ಟೇಟ್ ಯುನಿವರ್ಸಿಟಿಯಿಂದ ಸೆಕೆಂಡರಿ ಶಿಕ್ಷಣದಲ್ಲಿ M.T ಪದವಿ ಪಡೆದರು (1966). ಬಳಿಕ ರೋಪರ್ ರವರು ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯಿಂದ ಬೈಬಲ್ ಮತ್ತು ಮಿಷನ್ಸ್ ನಲ್ಲಿ M.S ಪದವಿಯನ್ನು ಮುಗಿಸಿದರು(1977), ನಂತರ ಮಿಚಿಗನ್ ಯುನಿವರ್ಸಿಟಿಯ ನಿಯರ್ ಈಸ್ಟರ್ನ್ ಸ್ಟಡೀಸ್ ವಿತ್ ಆನ್ ಓಲ್ಡ್ ಟೆಸ್ಟಮೆಂಟ್ ಕಾನ್ಸೆಂಟ್ರೇಷನ್ ವಿಭಾಗದಿಂದ Ph.D ಪದವಿಯನ್ನು ಪೂರ್ತಿಗೊಳಿಸಿದರು (1988). ಹೆರಿಟೇಜ್ ಕ್ರಿಶ್ಚಿಯನ್ ಯುನಿವರ್ಸಿಟಿಯಿಂದ ಗ್ರೀಕ್  ಗೆ ಪ್ರಾಶಸ್ತ್ಯ ನೀಡಿ M.A ಪದವಿ ಗಳಿಸಿದರು (2007). ರೋಪರ್ ರವರು ಚಾರ್ಲಿ, ಟೆಕ್ಸಾಸ್ ನಲ್ಲಿರುವ ಚರ್ಚುಗಳಿಗಾಗಿ 1955 ರಲ್ಲಿ ಬೋಧನೆ ಆರಂಭಿಸಿದರು. ಅಂದಿನಿಂದ ತೊಡಗಿ, ಅವರು ಓಕ್ಲಹಾಮ, ಟೆನ್ನೆಸ್ಸೀ, ಮಿಚಿಗನ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಸುವಾರ್ತೆ ಬೋಧಿಸಿದ್ದಾರೆ. ಅಷ್ಟೇ ಅಲ್ಲದೆ, ಅವರು ವೆಸ್ಟರ್ನ್ ಕ್ರಿಶ್ಚಿಯನ್ ಕಾಲೇಜ್, ಮಕ್ವರೀ ಸ್ಕೂಲ್ ಆಫ್ ಪ್ರೀಚಿಂಗ್ (ನಾರ್ತ್ ರೈಡ್, ಆಸ್ಟ್ರ‍ೇಲಿಯಾ), ಮಿಚಿಗನ್ ಕ್ರಿಶ್ಚಿಯನ್ ಕಾಲೇಜ್, ಲಿಪ್ಸ್ ಕೋಂಬ್ ಯುನಿವರ್ಸಿಟಿ ಮತ್ತು ಹೆರಿಟೇಜ್ ಕ್ರಿಶ್ಚಿಯನ್ ಯುನಿವರ್ಸಿಟಿಯಲ್ಲಿಯೂ ಕಲಿಸಿದ್ದಾರೆ.  2000 ದಿಂದ 2005 ರವರೆಗೆ, ರೋಪರ್ ರವರು ಹೆರಿಟೇಜ್ ಕ್ರಿಶ್ಚಿಯನ್ ನಲ್ಲಿ ಗ್ರಾಜುಯೇಟ್ ಸ್ಟಡೀಸ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಅವರು ಟ್ರೆಂಟ್ ಚರ್ಚ್ ಆಫ್ ಕ್ರೈಸ್ಟ್ (ಟ್ರೆಂಟ್, ಟೆಕ್ಸಾಸ್) ನಲ್ಲಿ ಬೋಧಿಸುತ್ತಿದ್ದಾರೆ ಮತ್ತು ಆರ್ಕನ್ಸಾಸ್ ನ ಸೆಯಾರ್ಕಿಯಲ್ಲಿ ಟ್ರೂತ್ ಫಾರ್ ಟುಡೆಗಾಗಿ ಬರೆಯುತ್ತಾರೆ. ಕೋಯ್ ಮತ್ತು ಅವರ ಪತ್ನಿ ಶಾರ್ಲೆಟ್ ಗೆ ಮೂವರು ಮಕ್ಕಳಿದ್ದು, ಹತ್ತು ಮಂದಿ ಮೊಮ್ಮಕ್ಕಳಿದ್ದಾರೆ.
Coy D. Roper

ಡೇವಿಡ್ ಎಲ್. ರೋಪರ್

ಡೇವಿಡ್ ಎಲ್ ರೋಪರ್ ರವರು ಓಕ್ಲಹಾಮದಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದರು. ಅವರು ಅಬಿಲೀನ್ ಕ್ರಿಶ್ಚಿಯನ್ ಯುನಿವರ್ಸಿಟಿಯಿಂದ ಬೈಬಲ್ ನಲ್ಲಿ BS ಮತ್ತು MS ಪದವಿ ಪಡೆದರು. ರೋಪರ್ ರವರು ತಮ್ಮ ಹದಿನೆಂಟನೆ ವಯಸ್ಸಿನಲ್ಲಿ ಬೋಧನಾವೃತ್ತಿ ಆರಂಭಿಸಿದರು ಮತ್ತು ಓಕ್ಲಹಾಮ, ಟೆಕ್ಸಾಸ್ ಮತ್ತು ಆರ್ಕನ್ಸಾಸ್‍ನ ಏಳು ಕ್ರೈಸ್ತಸಭೆಗಳಲ್ಲಿ ಪೂರ್ಣಾವಧಿಯ ಬೋಧಕ ಹುದ್ದೆಯನ್ನು ಹೊಂದಿದ್ದರು. ಅವರು ಇಂಗ್ಲೆಂಡ್, ಸ್ಕಾಟ್‍ಲ್ಯಾಂಡ್, ಇಟೆಲಿ, ಟರ್ಕಿ, ಜಪಾನ್ ಮತ್ತು ರೊಮೇನಿಯಾ ಸೇರಿದಂತೆ ಪ್ರಪಂಚದ ಇತರ ಭಾಗಗಳಲ್ಲೂ ಸುವಾರ್ತೆಯನು ಸಾರಿದ್ದಾರೆ.    1968 ರಿಂದ 1977 ರವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರೋಪರ್ ಮತ್ತು ಅವರ ಕುಟುಂಬದವರು ಸ್ಥಳೀಯ ಕ್ರೈಸ್ತಸಭೆಯಲ್ಲಿ ಮತ್ತು ಮಕ್ವೇರಿ ಸ್ಕೂಲ್ ಆಫ್ ಪ್ರೀಚಿಂಗ್‍ನಲ್ಲಿ (the Macquarie School of Preaching) ಮಿಶನರಿಗಳಾಗಿ ಕೆಲಸ ಮಾಡಿದ್ದಾರೆ.  ರೋಪರ್ ರವರು ಅಸಂಖ್ಯ ಕಿರುಪುಸ್ತಕಗಳು, ಪುಸ್ತಕಗಳು ಮತ್ತು ಕೈಪಿಡಿಗಳನ್ನು ಬರೆದಿದ್ದಾರೆ. ಅವರ ಕೆಲವು ಬರಹಗಳೆಂದರೆ  ದಿ ಡೇ ಕ್ರೈಸ್ಟ್ ಕೇಮ್(ಅಗೇನ್), ಪ್ರಾಕ್ಟಿಕಲ್ ಕ್ರಿಶ್ಚಿಯಾನಿಟಿ: ಸ್ಟಡಿಸ್ ಇನ್ ದಿ ಬುಕ್ ಆಫ್ ಜೇಮ್ಸ್, ಗೆಟ್ಟಿಂಗ್ ಸೀರಿಯಸ್ ಅಬೌಟ್ ಲವ್ ಮತ್ತು ತ್ರೂ ದಿ ಬೈಬಲ್. ಅವರು ಕ್ರಿಶ್ಚಿಯನ್ ಟಿವಿ ಮತ್ತು ರೇಡಿಯೊ ಪ್ರೋಗ್ರಾಂಗಳನ್ನು ಸಹ ನಡೆಸಿಕೊಟ್ಟಿದ್ದಾರೆ. ರೋಪರ್ ರವರು ಆರ್ಕನ್ಸಾನ್ ನ, ಸೆಯಾರ್ಕಿನಲ್ಲಿರುವ ಟ್ರೂತ್ ಫಾರ್ ಟುಡೆಯ ಸಹ ಎಡಿಟರ್ ಆಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಇದರ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
David L. Roper

ಡಾನ್ ಶ್ಯಾಕಲ್‍ಫೋರ್ಡ್

ನಿವೃತ್ತ ಬೈಬಲ್ ಪ್ರೊಫೆಸರ್ ಆಗಿರುವ ಡಾನ್ ಶ್ಯಾಕಲ್‍ಫೋರ್ಡ್‍ರವರು ಆರ್ಕನ್ಸಾಸ್‍, ಸೆಯಾರ್ಕ್‍ನಲ್ಲಿರುವ ಹಾರ್ಡಿಂಗ್ ಯುನಿವರ್ಸಿಟಿಯಲ್ಲಿ ಮೂವತ್ತು ವರ್ಷಗಳವರೆಗೆ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಟೆಕ್ಸಾಸ್‍ನಲ್ಲಿರುವ ಲಬ್ಬೋಕ್ ಕ್ರಿಶ್ಚಿಯನ್ ಯುನಿವರ್ಸಿಟಿಯ ಬೈಬಲ್ ವಿಭಾಗದಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಿಸ್ಸೋರಿಯ  ಜೋಪ್ಲಿನ್ ಎಂಬ ಊರಿನವರಾದ ಶ್ಯಾಕಲ್‍ಫೋರ್ಡ್‍ರವರು ಓಕ್ಲಹಾಮ ಕ್ರಿಶ್ಚಿಯನ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದು ಡೇವಿಡ್ ಲಿಪ್ಸ್ ಕೋಂಬ್ ಯುನಿವರ್ಸಿಟಿಯಲ್ಲಿ ಅಂಡರ್ ಗ್ರ್ಯಾಜುಯೇಟ್ ಪದವಿ ಪಡೆದರು.  ಅವರು ನ್ಯೂ ಆರ್ಲೀನ್ಸ್ ಬ್ಯಾಪ್ಟಿಸ್ಟ್ ಥಿಯಾಲಾಜಿಕಲ್ ಸೆಮಿನರಿಯಿಂದ B.D ಮತ್ತು Th.D ಪದವಿ ಪಡೆದರು. ಒಬ್ಬ ಸುವಾರ್ತಾಸೇವಕರಾಗಿ, ಶ್ಯಾಕಲ್‍ಫೋರ್ಡ್‍ರವರು ಓಕ್ಲಹಾಮ, ಟೆನ್ನೆಸ್ಸೀ, ಟೆಕ್ಸಾಸ್ ಮತ್ತು ಲೂಸಿಯಾನದ ಕ್ರೈಸ್ತಸಭೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.  ಅವರು ಪಾಲೆರ್ಮೊ, ಸಿಸಿಲಿ ಮತ್ತು ಫ್ಲಾರೆನ್ಸ್, ಇಟಲಿಯಲ್ಲಿ ಮಿಶನರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಅವರು ಇಪ್ಪತ್ತೈದು ವರ್ಷಕ್ಕಿಂತಲೂ ಹೆಚ್ಚು ಸಮಯ ಆರ್ಕನ್ಸಾಸ್‍ನ ಸೆಯಾರ್ಕಿನಲ್ಲಿರುವ ಕ್ಲೊವೆರ‍್ಡೇಲ್ ಚರ್ಚ್ ಆಫ್ ಕ್ರೈಸ್ಟ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾರ್ಡಿಂಗ್ ಯುನಿವರ್ಸಿಟಿಯಲ್ಲಿರುವಾಗ, ಶ್ಯಾಕಲ್‍ಫೋರ್ಡ್‍ರವರು ಬೈಬಲ್ ಪ್ರೊಫೆಸರ್ ಆಗಿದ್ದರು ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಡೀನ್ ಆಗಿದ್ದರು. ಪ್ರಸ್ತುತ ಅವರು ಟ್ರೂತ್ ಫಾರ್ ಟುಡೆಗೆ ಹಳೆ ಒಡಂಬಡಿಕೆಯ ಸಲಹೆಗಾರರಾಗಿ ಹಾಗೂ ಹಾರ್ಡಿಂಗ್‍ನಲ್ಲಿ ಅಧೀನ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಲಬಾಮಾದ ಮೋಂಟ್ಗೊಮೆರಿಯಲ್ಲಿನ ಸದರ್ನ್ ಕ್ರಿಶ್ಚಿಯನ್ ಯುನಿವರ್ಸಿಟಿಯಲ್ಲಿ ಹಳೆ ಒಡಂಬಡಿಕೆಯ ಗ್ರಾಜುಯೇಟ್ ಕೋರ್ಸ್‍ಗಳನ್ನು ಬೋಧಿಸುತ್ತಿದ್ದಾರೆ. ಅವರು, ಎ ಸರ್ವೆ ಆಫ್ ಚರ್ಚ್ ಹಿಸ್ಟ್ರಿ ಎಂಬ ಪುಸ್ತಕದ ಲೇಖಕರಾಗಿದ್ದಾರೆ ಮತ್ತು ಲಬ್ಬೋಕ್ ಕ್ರಿಶ್ಚಿಯನ್ ಹಾಗೂ ಹಾರ್ಡಿಂಗ್‍ನಲ್ಲಿನ ಬೋಧನಾ ಪಠ್ಯಪುಸ್ತಕಗಳನ್ನು ಎಡಿಟ್ ಮಾಡಿದ್ದಾರೆ. ಅವರ ಲೇಖನಗಳು ಗೋಸ್ಪೆಲ್ ಅಡ್ವೊಕೇಟ್, ರಿಸ್ಟೋರೇಷನ್ ಕ್ವಾರ್ಟರ್ಲಿ, ಫರ್ಮ್ ಫೌಂಡೇಷನ್, ಪವರ್ ಆಫ್ ಟುಡೆ ಮತ್ತು ಕ್ರಿಶ್ಚಿಯನ್ ಕ್ರಾನಿಕಲ್‍ನಲ್ಲಿ ಪ್ರಕಟಗೊಂಡಿವೆ. ಡಾನ್ ಮತ್ತು ಅವರ ಪತ್ನಿ ಜೋಯ್ಸ್ ಗೆ ಐದು ಮಕ್ಕಳಿದ್ದು, ಹದಿನೈದು ಮೊಮ್ಮಕ್ಕಳಿದ್ದಾರೆ.
Don Shackelford

ಡುಯಾನ್ ವಾರ್ಡನ್

ಈ ಮಾಲಿಕೆಯ ಹೊಸ ಒಡಂಬಡಿಕೆಯ ಸಹ ಎಡಿಟರ್ ಆಗಿರುವ ಡಾ.ಡುಯಾನ್ ವಾರ್ಡನ್‍ರವರು ಆರ್ಕನ್ಸಾಸ್‍ನ ಫ್ರಾಂಕ್ಲಿನ್‍ನಲ್ಲಿ ಹುಟ್ಟಿದರು,  ಆದರೆ ಮಿಚಿಗನ್‍ನ ಫ್ಲಿಂಟ್‍ನಲ್ಲಿ ಶಿಕ್ಷಣವನ್ನು ಪಡೆದರು. ಅವರು ಫ್ರೀಡ್ ಹಾರ್ಡೆಮನ್ ಯುನಿವರ್ಸಿಟಿಯಿಂದ A.A. ಪದವಿಯನ್ನು, ಹಾರ್ಡಿಂಗ್ ಯುನಿವರ್ಸಿಟಿಯಿಂದ B.A. ಪದವಿಯನ್ನು , ಹಾರ್ಡಿಂಗ್ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ರಿಲಿಜಿಯನ್‍ನಿಂದ M.A.R ಪದವಿಯನ್ನು ಮತ್ತು ಡ್ಯೂಕ್ ಯುನಿವರ್ಸಿಟಿಯಿಂದ ಹೊಸ ಒಡಂಬಡಿಕೆಯಲ್ಲಿ Ph.D ಪದವಿಯನ್ನು ಗಳಿಸಿದರು. ಇದರೊಂದಿಗೆ ಡಾ ವಾರ್ಡನ್‍ರವರು ಕೊಲಂಬಿಯ ಯುನಿವರ್ಸಿಟಿ ಮತ್ತು ಗ್ರೀಸ್‍ನ ಅಥೆನ್ಸ್ನಲ್ಲಿರುವ ಅಮೇರಿಕನ್ ಸ್ಕೂಲ್ ಆಫ್ ಕ್ಲಾಸಿಕಲ್ ಸ್ಟಡೀಸ್‍ನಿಂದ ಶಾಸ್ತ್ರೀಯ ಅಧ್ಯಯನದಲ್ಲಿ ಪೋಸ್ಟ್ ಡಾಕ್ಟರೇಟ್ ಸಂಶೋಧನೆಯನ್ನು ಪೂರ್ತಿಗೊಳಿಸಿದ್ದಾರೆ. ಡಾ. ವಾರ್ಡನ್‍ರವರು ಓಹಿಯೋ ವ್ಯಾಲಿ ಯುನಿವರ್ಸಿಟಿ ಹಾಗೂ ಹಾರ್ಡಿಂಗ್ ಯುನಿವರ್ಸಿಟಿಯಲ್ಲಿ ಬೈಬಲ್ ಬೋಧಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ.   ಅವರು ಓಹಿಯೋ ವ್ಯಾಲಿಯಲ್ಲಿ ಬೈಬಲ್ ವಿಭಾಗದ ಅಧ್ಯಕ್ಷರಾಗಿದ್ದರು (1986-1993) ಮತ್ತು ಹಾರ್ಡಿಂಗ್‍ನಲ್ಲಿನ ಕಾಲೇಜ್ ಆಫ್ ಬೈಬಲ್ ಆಂಡ್ ರಿಲೀಜಿಯನ್‍ನ ಡೀನ್ ಆಗಿದ್ದರು (1996-2005). ಅವರು ಅಮ್ರಿಡ್ಜ್ ಯುನಿವರ್ಸಿಟಿಯಲ್ಲಿ ಹೊಸ ಒಡಂಬಡಿಕೆಯ ಪ್ರೊಫೆಸರ್ ಬೋಧನೆ ಮುಂದುವರಿಸುತ್ತಿದ್ದಾರೆ. ಬೋಧನೆಯ ಜೊತೆಗೆ, ಡಾ ವಾರ್ಡನ್‍ರವರು ಅವರ ಸೇವಾವಧಿಯುದ್ದಕ್ಕೂ ಮಿನಿಸ್ಟ್ರಿಯಲ್ಲಿ ಕೆಲಸ ಮಾಡಿರುತ್ತಾರೆ. ಪಶ್ಚಿಮ ವರ್ಜೀನಿಯಾ, ವರ್ಜೀನಿಯಾ ಮತ್ತು ಆರ್ಕನ್ಸಾಸ್‍ನಲ್ಲಿ ಅವರು ಪೂರ್ಣಾವಧಿಯ ಬೋಧನೆ ನೀದಿದ್ದಾರೆ; ಮತ್ತು ಓಹಿಯೋ ವ್ಯಾಲಿ ಹಾಗೂ ಹಾರ್ಡಿಂಗ್‍ನಲ್ಲಿ ಕಲಿಸುತ್ತಿರುವಾಗ ಮಿನಿಸ್ಟ್ರಿಯಲ್ಲಿ ಅರೆ-ಕಾಲಿಕ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ವೆಲ್ವ್ಟ್ ರಿಡ್ಜ್ ಚರ್ಚ್ ಆಫ್ ಕ್ರೈಸ್ಟ್ ನಲ್ಲಿ ಬೋಧನೆ ನೀಡುತ್ತಾರೆ. ಡಾ. ವಾರ್ಡನ್ ರವರು ವಿದ್ವತ್ಪೂರ್ಣ ಪ್ರಕಟನೆಗಳಲ್ಲಿ ಹಲವಾರು ಪ್ರಬಂಧಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ, ಇವುಗಳಲ್ಲಿ ಕೆಲವೆಂದರೆ  ಬಿಬ್ಲಿಕಲ್ ಇಂಟರ್ ಪ್ರಿಟೇಷನ್: ಸ್ಟಡೀಸ್ ಇನ್ ಆನರ್ ಆಫ್ ಜ್ಯಾಲ್ ಪಿ ಲುವಿಸ್, ಕ್ಲಾಸಿಕಲ್ ಫಿಲಾಲಜಿ, ರಿಸ್ಟೋರೇಷನ್ ಕ್ವಾರ್ಟರ್ಲಿ ಮತ್ತು  ಜರ್ನಲ್ ಫಾರ್ ದಿ ಇವ್ಯಾಂಜಲಿಕಲ್ ಥಿಯಾಲಾಜಿಕಲ್ ಸೊಸೈಟಿ. ಅವರು ಟ್ರೂತ್ ಫಾರ್ ಟುಡೆ, ಗಾಸ್ಪೆಲ್ ಅಡ್ವೊಕೇಟ್, ಫರ್ಮ್ ಫೌಂಡೇಷನ್  ಮತ್ತು ಕ್ರಿಶ್ಚಿಯನ್ ಕ್ರೋನಿಕಲ್ ಗೂ ಲೇಖನಗಳನ್ನು ಬರೆದಿರುತ್ತಾರೆ. ಅವರು ಮತ್ತು ಅವರ ಪತ್ನಿ ಜಾನೆಟ್‍ಗೆ ಡೇವಿಡ್ ಎಂ ವಾರ್ಡನ್ ಎಂಬ ಮಗನಿದ್ದು, ಡೇವಿಡ್ ಎ. ಮಾರ್ಟಿನ್ ಎಂಬ ಸಾಕುಮಗನಿದ್ದಾನೆ.
Duane Warden